ಮಂತ್ರಾಲಯ. ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಗುರುವಾರ ನಡೆದ ಪೂರ್ವಾರಾಧನೆ ಆಗಮಿಸಿದ ಆಂಧ್ರಪ್ರದೇಶದ ರಾಜ್ಯಪಾಲರಾದ ಜಸ್ಟಿಸ್ ಅಬ್ದುಲ್ ನಜೀರ್ ರಾಯರ ಮೂಲ ಬೃಂದಾವನಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಶ್ರೀ ಮಠದ ಆವರಣದಲ್ಲಿ ಪೂರ್ಣ ಕುಂಭ, ವಾದ್ಯ ಮೇಳಗಳೊಂದಿಗೆ ಆಗಮಿಸಿ ರಾಯರ ಮೂಲ ಬೃಂದಾವನ ದರ್ಶನ ಪಡೆದರು. ಬಳಿಕ
ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ, ಶ್ರೀ ಮಠವು ವಿಶ್ವಾದ್ಯಂತ ಮಧ್ವ ಸಿದ್ದಾಂತ ಪಸರಿಸುವ ಕಾರ್ಯ ಮಾಡುತ್ತಿದೆ ಎಂದರು.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಭಕ್ತರ ಪಾಲಿನ ಕಲ್ಪವೃಕ್ಷ ಕಾಮಧೇನು ಇದ್ದಂತೆ ಶ್ರೀ ಮಠವು ಸಾಮಾಜಿಕ ಕಾರ್ಯ ಮಾಡುತ್ತಿದ್ದು,
ಭಕ್ತಾದಿಗಳಿಗೆ ಅನ್ನದಾನ, ರೋಗಿಗಳಿಗೆ ಪ್ರಾಣದಾನ, ಗುರುಸಾರ್ವಭೌಮ ವಿದ್ಯಾಪೀಠದ ಮೂಲಕ ಆಧ್ಯಾತ್ಮಿಕ ಪ್ರಸಾರ, ಪರಿಮಳ ವಿದ್ಯಾಪೀಠದ ಮೂಲಕ ಮಕ್ಕಳಿಗೆ ಉಚಿತ ಶಿಕ್ಷಣ, ಕೇಂದ್ರ ಸರ್ಕಾರದಿಂದ ಸ್ವಚ್ಛ ಮಂತ್ರಾಲಯಕ್ಕೆ ಪಾತ್ರವಾಗಿದೆ. ಸೂಪರ್ ಸ್ಪೆಷಲ್ ಆಸ್ಪತ್ರೆ, ವಿಶ್ವವಿದ್ಯಾಲಯ, ಮಿನಿ ವಿಮಾನ ನಿಲ್ದಾಣ ಶ್ರೀ ಮಠದ ಯೋಜನೆಗಳಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಪಂಡಿತ ಕೇಸರಿ ಮಹಾ ಮಹಾಪೋದ್ಯಾಯ ರಾಜಾ ಎಸ್ ಗಿರಿ ಆಚಾರ್ಯ, ನ್ಯಾಯಮೂರ್ತಿ ಶ್ರೀ ಷಾ ನಂದ, ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ ಶ್ರಿನಿವಾಸರಾವ್, ವಿದ್ವಾನ ವಾದಿರಾಜ ಆಚಾರ್ಯ, ರಾಜಾ ಗೌತಮ ಆಚಾರ್ಯ ಸೇರಿದಂತೆ ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು
Megha News > State News > ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ರಾಯರಿಗೆ ವಿಶೇಷ ಪೂಜೆ
ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ರಾಯರಿಗೆ ವಿಶೇಷ ಪೂಜೆ
Tayappa - Raichur01/09/2023
posted on
Leave a reply