ರಾಯಚೂರು:- ಪ್ರಸ್ತುತ ಮನುಷ್ಯರು ಎಲ್ಲಾ ರೀತಿಯ ಸಾಧನೆ ಮಾಡಿದ್ದಾರೆ ಪಕ್ಷಿಯಂತೆ ಹಾರುತಿದ್ದಾನೆ, ಮೀನಿನಂತೆ ಈಜುತ್ತಿದ್ದಾನೆ ಆದರೆ ನೆಮ್ಮದಿ ಮಾತ್ರ ಧಾರ್ಮಿಕ-ಆಧ್ಯಾತ್ಮಿಕದಿಂದ ಮಾತ್ರ ಸಿಗಲು ಸಾಧ್ಯ ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ನಗರದ ಎನ್.ಜಿ.ಓ ಕಾಲೋನಿಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಜ್ಞಾನ ದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಾಸಿವೆಯಷ್ಟು ಸುಖಕ್ಕಾಗಿ ಬೆಟ್ಟದಷ್ಟು ಕಷ್ಟ ಇದೆ, ಆದರೂ ಜೀವನದಲ್ಲಿ ಸುಖವಿರಲಿ-ಕಷ್ಟವಿರಲಿ, ಸುಲಲಿತವಾಗಿ ಬದುಕಿ. ಇಂದಿನಿಂದ 15 ದಿನಗಳ ಕಾಲ ಜ್ಞಾನ ದಾಸೋಹ, ಹೇಮರೆಡ್ಡಿ ಮಲ್ಲಮ್ಮ ಪುರಾಣ ನಡೆಯುತ್ತದೆ, ಪ್ರಾರಂಭ ದಿನದಲ್ಲಿ ಇಷ್ಟು ಜನ ಸೇರಿರೋದು ತುಂಬಾ ಖುಷಿಯ ವಿಚಾರ, ಇಂತಹ ಕಾರ್ಯಕ್ರಮಗಳನ್ನು ಬಡಾವಣೆ ಜನರು ಸದುಪಯೋಗ ಪಡೆದುಕೊಂಡು, ಜ್ಞಾನಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು. ನಂತರ ಶಿಕ್ಷಕರಾದ ನೀಲಕಂಠ ಮಳಿಮಠ ಇವರು ‘ಜೀವನದಲ್ಲಿ ಹಾಸ್ಯ’ ಎಂಬ ವಿಷಯದ ಮೇಲೆ ಹಾಸ್ಯ ಚಟಾಕಿಯನ್ನು ಸಿಡಿಸಿದರು, ತಮ್ಮ ಜೀವನದಲ್ಲಿ ಅನುಭವಿಸಿದ ಹಾಸ್ಯಗಳನ್ನೇ ಸಾದರ ಪಡಿಸಿದರು, ನೆರೆದಿದಂತಹ ಭಕ್ತಾದಿಗಳು ಹಾಸ್ಯದಲ್ಲಿ ತೇಲಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್.ಕೆ ನಾಗರಾಜ ನಗರಸಭೆ ಸದಸ್ಯರು, ಎಸ್.ಎಂ ಸಿದ್ದರೆಡ್ಡಿ, ಅಶೋಕಪ್ಪ ಗೌಡ ಮಿರ್ಜಾಪುರ್, ಶಂಕರಗೌಡ ಬಡಾವಣೆಯ ಹಿರಿಯರು ಭಾಗಿಗಳಾಗಿದ್ದರು. ನಿರೂಪಣೆ ಶರಣಬಸವ ಪಾಳರಿಮಠ, ಸ್ವಾಗತ ಮಲ್ಲಿಕಾರ್ಜುನ ನಾಡಗೌಡ, ವೇದಘೋಷ ಶಂಕರಲಿಂಗ ಆರ್ಚಾಕರು, ವಂದನಾರ್ಪಣೆ ಪಿ. ಮಂಜುನಾಥ ನಡೆಸಿಕೊಟ್ಟರು.
Megha News > Local News > ಮನುಷ್ಯರಿಗೆ ನೆಮ್ಮದಿ ಸಿಗಬೇಕಾದರೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ದಿಂದ ಮಾತ್ರ ಸಾಧ್ಯ- ಶ್ರೀ ರಾಚೋಟಿವೀರ ಮಹಾಸ್ವಾಮಿಗಳು