ರಾಯಚೂರು. ಶ್ರೀರಾಮ ಇಡೀ ಭಾರತೀಯರ ರಾಮ, ಯಾವುದೇ ಬಿಜೆಪಿಗೆ ಸೀಮಿತವಲ್ಲ. ರಾಮಮಂದಿರ ಪೂರ್ಣಗೊಳ್ಳದೇ ಉದ್ಘಾಟನೆ ಮಾಡುವುದು ಸರಿಯಲ್ಲ ಇದನ್ನು ಶಂಕರಾಚಾ ರ್ಯ ಶಿಷ್ಯಂದಿರೇ ಹೇಳ್ತಿದಾರೆ ಅದು ಪೂರ್ಣ ಗೊಳ್ಳದೆ ಉದ್ಘಾಟನೆ ಸರಿಯಲ್ಲ ಎನ್ನುತ್ತಿದ್ದಾರೆ, ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಅಯೋಧ್ಯೆದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನು ಪೂರ್ಣವಾಗಿಲ್ಲ, ಆದರೆ ಪೂರ್ಣಗೊಳ್ಳದೇ ಉದ್ಘಾಟಿಸುತಿರುವುದು ಸರಿಯಲ್ಲ, ರಾಮ ಹಿಂದೆಯೂ ರಾಮನಿದ್ದ ಹಳ್ಳಿಗಳಲ್ಲಿ ಬಜನೆ ಮಾಡುತ್ತಿದ್ದೆವು ಎಂದರು.
ಕಾಂತರಾಜ್ ವರದಿಯನ್ನು ಸರ್ಕಾರ ಸ್ವೀಕ ರಿಸಬೇಕು, ಜಾತಿ ಜನಗಣತಿಗೆ ಮುಂದುವರಿದ ಜಾತಿಗಳು ಅಡ್ಡಿಯಾಗಬಾರದು. ಜಾತಿ ಗಣತಿಯ ವರದಿಯಲ್ಲಿ ಏನು ಇದೆ ಎಂಬುದು ತಿಳಿಯಬೇ ಕು ತಿಳಿಯದೇ ವಿರೋಧಿಸುತಿ ರುವುದು ಸರಿಯಲ್ಲ ಎಂದರು.
ಜಾತಿಗಣತಿ ಯಾರು ನೋಡಿದಿರಾ ಎಂದು ಪ್ರಶ್ನಿಸಿದ ಅವರು, ಹಾವನೂರು ವರದಿ ಬಂದಾಗಲೂ ಇದೇ ರೀತಿ ವಿರೋಧವಾಗಿತ್ತು. ಆದರೆ ಅದು ಜಾರಿಯಾಯಿತು. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅವರೇ ಜಾತಿ ಗಣತಿ ಮಾಡಿಸಿದ್ದಾರೆ, ಇದೀಗ ಅವರು ಸಿಎಂ ಆಗಿದ್ದಾರೆ, ಅದನ್ನು ಸ್ವೀಕಾರ ಮಾಡಬೇಕು ಸಾದಕ ಬಾದಕಗಳು ಕುರಿತು ಚರ್ಚೆಗೆ ಬಿಡಬೇಕು ಎಂದು ಸರ್ಕಾರಕ್ಕೆ ಆಗ್ರಹಪಡಿಸುತ್ತೇವೆ. ಯಾರು ನೋಡದೆ ಊಹಾಪೋಹಗಳಿಗೆ ಕಿವಿಗೊಡಬಾರದು.
ಆರ್ ಅಶೋಕ, ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಸಮೀಕ್ಷೆ ನೋಡಿದಿರಾ, ಸುಮ್ಮನೆ ಯಾಕೆ ಮಾಡ್ತಿದಿರಾ ಎಂಬುದು ಸರಿಯಲ್ಲ
ಅಂದ್ರೆ ಸಮೀಕ್ಷೆ ಸರಿ ಇಲ್ಲವೇ. ಅನಾವಶ್ಯಕವಾಗಿ ಹೇಳಿಕೆ ಸಲ್ಲದು, ಸರ್ಕಾರಿ ಶಾಲಾ ಶಿಕ್ಷಕರೇ ಮನೆ ಮನೆಗೆ ತೆರಳಿ ಜಾತಿ ಗಣತಿ ಮಾಡಿದ್ದಾರೆ, ಅವರೇ ಮತದಾರರ ಪಟ್ಟಿ ಮಾಡಿದ್ದಾರೆ ಆದರೆ ಅದು ಸರಿ ಇದೇನಾ, ಎಲ್ಲಾ ಜಾತಿ ಜನಾಂಗಗಳ ಸಮಿಕ್ಷೆ ನಡೆಸಿದ್ದು, ಕಾಂತರಾಜ ವರದಿ ಸರ್ಕಾರ ಸ್ವೀಕಾರ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.