Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಮಹಿಳಾ ವಕೀಲರ ರಾಜ್ಯ ಸಮಾವೇಶ ಪ್ರತಿಯೊಬ್ಬರೂ ವೃತ್ತಿ ನೈಪುಣ್ಯತೆ ಬೆಳಸಿಕೊಂಡರೆ ನಮ್ಮನ್ನು ಮೇಲೆತ್ತಲು ಸಾಧ್ಯ- ನ್ಯಾಯಾದೀಶೆ ಎಮ್.ಜಿ. ಉಮಾ

ಮಹಿಳಾ ವಕೀಲರ ರಾಜ್ಯ ಸಮಾವೇಶ ಪ್ರತಿಯೊಬ್ಬರೂ ವೃತ್ತಿ ನೈಪುಣ್ಯತೆ ಬೆಳಸಿಕೊಂಡರೆ ನಮ್ಮನ್ನು ಮೇಲೆತ್ತಲು ಸಾಧ್ಯ- ನ್ಯಾಯಾದೀಶೆ ಎಮ್.ಜಿ. ಉಮಾ

ರಾಯಚೂರು.ಪ್ರತಿಯೊಬ್ಬ ವಕೀಲರು ವೃತ್ತಿ ನೈಪುಣ್ಯತೆಯನ್ನು ಮೈಗೂಡಿಸಿಕೊಂಡರೆ ಅದು ನಮ್ಮೆಲ್ಲರನ್ನು ಮೇಲೆತ್ತಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಮ್. ಜಿ. ಉಮಾ ಹೇಳಿದರು.

ನಗರದ ಕೃಷಿ ವಿಶ್ವ ವಿದ್ಯಾಲಯದ ಪ್ರೇಕ್ಷಾಗೃಹ ದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ, ಅಖಿಲ ಭಾರತ ವಕೀಲರ ಮಹಿಳಾ ಉಪ ಸಮಿತಿ ಹಾ ಗೂ ರಾಯಚೂರು ನ್ಯಾಯ ವಾದಿಗಳ ಸಂಘದ ವತಿಯಿಂದ‌ ಮಹಿಳಾ ವಕೀಲರ ರಾಜ್ಯ ಸಮ್ಮೇ ಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದರು,
ವಕೀಲರು ನಾಗರೀಕ ಸಮಾಜದಲ್ಲಿ ಮಹಿಳೆಯರಿಗೆ ಪುರುಷರು ಸಮಾನವಾಗಿ ಕೆಲಸ ಮಾಡುತ್ತಿದ್ದು, ನ್ಯಾಯಾಂಗದ ವ್ಯವಸ್ಥೆಯಲ್ಲಿ ಮಹಿಳೆಯರು ವಕೀಲ ವೃತ್ತಿಯಲ್ಲಿ ಕಡಿಮೆ ಇದ್ದಾರೆ, ನ್ಯಾಯಾಂಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಅನೇಕ ಸಮಸ್ಯೆಗಳಿದ್ದು ಅವುಗಳ ಕೇಳುವರಿಲ್ಲದಂತಾಗಿದೆ, ಅನೇಕ ವರ್ಷಗಳಿಂದ ಮಹಿಳೆಯರ ಸಮಸ್ಯೆ ಆಲಿಸದಿರುವುದು ಸಮಾಜದಲ್ಲಿರುವ ಪ್ರವೃತ್ತಿಯಾಗಿದೆ, ಇದು ಮಹಿಳೆಯ ಸಾಮರ್ಥ್ಯದ ಕೊರತೆಯಾಗಿದೆ ಎನ್ನುವುದು ಕೂಡ ಒಂದು, ಮಹಿಳೆಯರು ಸಮಾಜದಲ್ಲಿ ನಾಗರಿಕರ ಭ್ರಮೆಯಿಂದ ಹೋಗಲಾಡಿಸಬೇಕಿದೆ, ಅದನ್ನು ಕಿತ್ತೊಗೆಯಲು ಶ್ರಮಿಸಬೇಕಿದೆ ಎಂದರು.
ವಕೀಲರ ಕಾಯಕದಲ್ಲಿ ಸಮರ್ಥಳು ಎಂದು ಕಂಡುಕೊಳ್ಳಲು ಅಂತಹ ನೈಪುಣ್ಯತೆಯನ್ನು ಬೆಳೆಸಿಕೊಳ್ಳಬೇಕು, ಮಹಿಳಾ ನ್ಯಾಯವಾದಿಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪುರುಷ ನ್ಯಾಯವಾದಿಗಳ ಮಿತ್ರರು ಜೊತೆಗಿದ್ದಾರೆ ಎಂಬುದಕ್ಕೆ ಈ ಸಮ್ಮೇಳನ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ವಕೀಲ ವೃತ್ತಿಯು ಒಂದು ಸಮಾಜದ ಸುಧಾರಕವಿದ್ದಂತೆ, ಅನ್ಯಾಯ ಮತ್ತು ಗಟ್ಟಿ ಧ್ವನಿಯಲ್ಲಿ ಮಾತನಾಡಿಲು, ನ್ಯಾಯಾಲಯದಲ್ಲಿ ವಾದ ಮಂಡಿಸಲು ಸಾಮರ್ಥ್ಯವನ್ನು ಬೆಳೆಸಿಕೊಳ್ಳತ್ತದೆ, ದೇಶದಲ್ಲಿ ನ್ಯಾಯಾಂಗವು ಬಲಿಷ್ಠವಾಗಿದೆ, ಪ್ರಜಾಪ್ರಭುತ್ವದ ಒಂದು ಅಂಗವಾಗಿರುವ ನ್ಯಾಯಾಂಗವು ಬಲಿಷ್ಠ ಭಾರತ ನಿರ್ಮಾಣಕ್ಕೆ ಒಂದು ಅಂಗವಾಗಿದೆ ಎಂದು ತಿಳಿಸಿದರು.
ಸಮಾಜದ ವ್ಯವಸ್ಥೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಕಾಣುತ್ತಿದ್ದೇವೆ ಆದರೆ, ನ್ಯಾಯಾಂಗದ ಕಡೆಗೆ ಬರಲು ಅವಕಾಶ ಕೊಡಬಾರದು, ಸಮರ್ಥವಾಗಿ ತಮ್ಮ ವೃತ್ತಿಯನ್ನು ಮುಂದುವರೆಸಿಕೊಂಡು ಹೋದರೆ ಅದು ನಮ್ಮ ಹತ್ತಿರ ಸುಳಿಯದು, ನ್ಯಾಯಾಧೀಶರು ಮತ್ತು ಕಕ್ಷಿದಾರರಿಗೆ ಪರಿಚಯವಿರುವುದಿಲ್ಲ, ಆದರೆ ಕಕ್ಷಿದಾರ ಮತ್ತು ವಕೀಲರ ಜೊತೆ ಪರಿಚಯವಿರುತ್ತದೆ, ವಕೀಲರು ಇದನ್ನು ಬಂಡವಾಗಿ ಮಾಡಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.
ಅಖಿಲ ಭಾರತ ರಾಷ್ಟ್ರೀಯ ವಕೀಲರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷೆ ಜಿ.ಚಮಕಿರಾಜ್ ಮಾತನಾಡಿ, ಸಮಾಜದಲ್ಲಿ ವ್ಯಕ್ತಿಗೆ ಅನ್ಯಾಯವಾದಾಗ ದೇವರು ಮತ್ತು ಕೋರ್ಟ್ ಮೊರೆ ಹೋಗಿತ್ತಾನೆ, ನ್ಯಾಯಾಂಗದ ವ್ಯವಸ್ಥೆಯಲ್ಲಿ ನ್ಯಾಯ ಒದಗಿಸಿಕೊಡುವ ಮೂಲಕ ಮುಂದಿನ ಪೀಳಿಗೆಗೆ ಈ ವ್ಯವಸ್ಥೆ ಮುಂದುವರೆಸಿಕೊಂಡು ಹೋಗುವಂತೆ ಮಾಡಬೇಕು, ಎಂದರು.
ದೇಶದಲ್ಲಿ ಶೇ 15 ರಷ್ಟು ಮಾತ್ರ ಮಹಿಳೆಯರು ವಕೀಲ ವೃತ್ತಿಯಲ್ಲಿ ತೊಡಗುತ್ತಿದ್ದಾರೆ, ದೇಶದ ಜನಸಂಖ್ಯೆಯಲ್ಲಿ ಶೇ 50 ರಷ್ಟು ಮಹಿಳೆಯರಲ್ಲಿ ಶೇ 15 ರಷ್ಟು ಮಾತ್ರ ವಕೀಲ ವೃತ್ತಿಯಲ್ಲಿದ್ದಾರೆ,
ನ್ಯಾಯಾಲಯದಲ್ಲಿ ಸವಾಲುಗಳನ್ನು ಸಮರ್ಥವಾಗಿ ಪರಿಹಾರ ಕಂಡುಕೊಳ್ಳಬೇಕಿದೆ, ವಕೀಲರು ಜ್ಞಾನದ ಜೊತೆಗೆ ತತ್ವಜ್ಞಾನವನ್ನು ಬೆಳೆಸಿಕೊಳ್ಳಬೇಕು, ನಿಷ್ಪಕ್ಷಪಾತವಾಗಿ ನ್ಯಾಯಾ ಲಯದಲ್ಲಿ ವಾದ ಮಂಡಿಸಿ ಕಕ್ಷಿದಾರನಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಾರುತಿ. ಎಸ್. ಬಾಗಡೆ, ಅಖಿಲ ಭಾರತ ಒಕ್ಕೂಟ ರಾಷ್ಟ್ರೀಯ ಉಪಾಧ್ಯಕ್ಷ ಜಿ. ಚಮಕಿರಾಜ್, ಅಖಿಲ ಭಾರತ ವಕೀಲರ ಒಕ್ಕೂ ಟದ ಅಧ್ಯಕ್ಷ ಹರಿಂದ್ರ ವಕೀಲರು, ರಾಷ್ಟ್ರೀಯ ವಕೀಲ ಒಕ್ಕೂಟದ ಉಪಾಧ್ಯಕ್ಷ ಶಂಕ್ರಪ್ಪ,
ರಾಜ್ಯ ವಕೀಲರ ಪರಿಷತ್ತು ಸದಸ್ಯ ಕೆ. ಕೋಟೇ ಶ್ವರ ರಾವ್, ಅಖಿಲ ಭಾರತ ವಕೀಲರ ಒಕ್ಕೂಟ ಮಹಿಳಾ ಉಪ ಸಮಿತಿ ಸಂಚಾಲಕಿ ಸವಿತಾ ಪಾಟೀಲ್, ಮಸ್ಕಿ ನಾಗರಾಜ ವಕೀಲ, ಶ್ರೀಕಾಂತ್ ರಾವ್ ವಕೀಲ, ಶಶಿಧರಗೌಡ, ಬಸವನ ಬಾಗೇ ವಾಡಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರಾದ ತಯ್ಯಬಾ ಸುಲ್ತಾನ, ಕಲಬುರಗಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸ್ಮಿತಾ ನಾಗಲಪೂರ, ನ್ಯಾ. ಮಮತಾ, ವಕೀಲ ಸುಶೀಲಾ ಎಸ್, ಉದಯ ಕುಮಾರ, ಲಕ್ಷ್ಮಿಭಾಯಿ ಎಸ್,
ಪಾರ್ವತಿ ದೇವಿ, ಶ್ರೀ ಲಕ್ಷ್ಮಿ, ಇದ್ದರು.

Megha News