Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಜಿಲ್ಲೆಯಲ್ಲಿ ಅಕ್ರಮ ಸಿಎಚ್ ಪೌಡರ್ ಸೇಂದಿ ಮಾರಾಟ, ಕಡಿವಾಣಕ್ಕೆ ಎರಡು ವಲಯ ವಿಂಗಡಣೆ ಚೆಕ್ ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಕ್ರಮ

ಜಿಲ್ಲೆಯಲ್ಲಿ ಅಕ್ರಮ ಸಿಎಚ್ ಪೌಡರ್ ಸೇಂದಿ ಮಾರಾಟ, ಕಡಿವಾಣಕ್ಕೆ ಎರಡು ವಲಯ ವಿಂಗಡಣೆ ಚೆಕ್ ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಕ್ರಮ

ರಾಯಚೂರು. ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟಕ್ಕೆ ಕಡಿವಾಣ ಹಾಕಲು ಜಿಲ್ಲೆಯಲ್ಲಿ ಎರಡು ವಲಯಗಳನ್ನಾಗಿ ಮಾಡಿದ್ದು, ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗ ಣದಲ್ಲಿ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆಯಲ್ಲಿ ಅಧಿಕಾರಿಗೆ ಸೂಚನೆ ನೀಡಿದರು‌.
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಿಎಚ್ ಪೌಡರ್ ಮಿಶ್ರಿತ ಸೇಂಧಿ ಮಾರಾಟ ನಡೆಯುತ್ತಿದ್ದು, ಆಂದ್ರ ಮತ್ತು ತೆಲಂಗಾಣದಿಂದ ರೈಲ್ವೆಗಳ ಮೂಲಕ ಕಳ್ಳ ಸಾಗಾಣೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸುತ್ತಿದೆ,
ಅಬಕಾರಿ ಇಲಾಖೆಯಿಂದ ಅಕ್ರಮ ಸೇಂದಿ, ಕಳ್ಳಭಟ್ಟಿ ಸರಾಯಿಗಳ ವಿರುದ್ಧ ದಾಖಲಿಸಬೇಕು,
ಅಬಕಾರಿ ಇಲಾಖೆಯು ಸೇಂದೆ, ಸಾರಾಯಿ ಮಾರಾಟ ಅಕ್ರಮಗಳನ್ನು ತಡೆಗಟ್ಟಲು ತುಂಬಾ ಕಷ್ಟಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ
ಜಿಲ್ಲೆಯಲ್ಲಿ ಎರಡು ವಲಯಗಳನ್ನಾಗಿ ಮಾಡಿದೆ ಎಂದರು.
ರಾಯಚೂರು ಮತ್ತು ದೇವದುರ್ಗ ಎರಡು ವಲಯಗಳಾಗಿ ವಿಂಗಡಿಸಲಾಗಿದೆ, ಆಯಾ ವಲಯಗಳಲ್ಲಿ ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಸಿ ಸಿ.ಹೆಜ್ ಮಿಶ್ರಿತ ಕಲಬೆರಕೆ ಸೇಂಧಿ ಮತ್ತು ಕಳ್ಳಭಟ್ಟಿ ಕೇಂದ್ರಗಳ ಸಾಗಾಣಿ, ಮಾರಾಟ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಆಯಾ ಸ್ಥಳಗಳಲ್ಲಿ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಮತ್ತು ಆರೋಗ್ಯ ಇಲಾಖೆಗಳ ಮೂಲಕ ಸಭೆ ನಡೆಸಿ ಮಾಹಿತಿ ನೀಡುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಒಟ್ಟು 2047 ಪ್ರಕರಣಗಳು ದಾಖಲಿಸಿ 141 ಆರೋಗಳ ದಸ್ತಗಿರಿ ಮಾಡಲಾಗಿದೆ, 118 ವಾಹನಗಳ ಜಪ್ತಿ ಮಾಡಿದೆ, 2023-24ನೇ ಸಾಲಿನ ನವೆಂಬರ್ ಅಂತ್ಯಕ್ಕೆ ಒಟ್ಟು ಕಳ್ಳಬಟ್ಟಿ ಪ್ರಕರಣಗಳು 13 ದಾಖಲಾಗಿದ್ದು, 4 ಅರೋಗಳ ದಸ್ತಗಿರಿ ಮಾಡಿದೆ, 75 ಲೀಟರ್ ಕಳ್ಳಬಟ್ಟಿ ಹಾಗೂ 130 ಬೆಲ್ಲದ್ ಕೊಳೆ ಲೀಟರ್ ವಶಕ್ಕೆ ಪಡೆದುಕೊಂಡಿದೆ, 2 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿಸಿದರು.
2023-24ನೇ ಸಾಲಿನ ನವೆಂಬರ್ ಅಂತ್ಯಕ್ಕೆ ಒಟ್ಟು ಸೇಂದಿ ಪ್ರಕರಣಗಳು 21, 6 ಜನ ಆರೋಪಿಗಳನ್ನು ದಸ್ತಗಿರಿ ಮಾಡದೆ, 1063 ಲೀಟರ್ ಸೇಂದಿ ವಶಕ್ಕೆ ಪಡೆದಿದೆ, 8.5 ಕೆಜಿ ಸಿಎಚ್ ಪೌಡರ್ ವಶಪಡಿಸಿಕೊಂಡಿದೆ, 1 ವಾಹನ ಜಪ್ತಿ ಮಾಡಿದೆ, ಎಂದರು.
ಆಂದ್ರದಿಂದ ನಗರಕ್ಕೆ ಬರುವ ರಸ್ತೆಯಲ್ಲಿ ಸೂಕ್ತ ಚೆಕ್ ಪೋಸ್ಟ್ ಮಾಡಲಾಗಿದೆ, ತಪಾಸಣೆ ಮಾಡಬೇಕು, ಆಂದ್ರ ಮತ್ತು ತೆಲಂಗಾಣ ದಿಂದ ಜಿಲ್ಲೆಗೆ ಬರುವ ಚೆಕ್ ಪೋಸ್ಟ್‌ ಗಳಲ್ಲಿ ಚಿಂತಲಕುಂಟಾ, ನಂದಿನಿ, ಹಿಂದೂಪುರ, ನಂದಿನಿ, ಮುಸಲದೊಡ್ಡಿ, ಮತ್ತು ದೊಡ್ಡಿ ಗ್ರಾಮದ ಮೂಲಕ ಜಿಲ್ಲೆಗೆ ಪ್ರವೇಶಿಲಿದ್ದು ಆ ಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಶಕ್ತಿನಗರ, ಸಿಂವನೋಡಿ ಹಾಗೂ ಯರಗೇರಾ ಚೆಕ್ ಪೋಸ್ಟ್ ನಲ್ಲಿ ಎಲ್ಲಾ ವಾಹನಗಳ ತಪಾಸಣೆ ಮಾಡಬೇಕಿದೆ, ನಗರದಲ್ಲಿ 10 ಮತ್ತು ರಾಯಚೂರು ತಾಲೂಕಿನ 16 ಗ್ರಾಮದಲ್ಲಿ ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡುತ್ತಿದ್ದು ಕಡಿವಾಣ ಹಾಕಬೇಕು, ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಜಿಪಂ ಸಿಇಒ ರಾಹುಲ್ ಪಾಂಡ್ವೆ ತುಕಾರಾಂ, ರೈಲ್ವೆ ಪೋಲಿಸ್ ಸಿಪಿಐ ಚಂದ್ರಶೇಖರ, ಸೇರಿದಂತೆ ಜಿಲ್ಲೆಯ ವಿವಿಧ ಪ್ರಮುಖ ಠಾಣೆಯ ಅಧಿಕಾರಿಗಳು, ತಹಶಿಲ್ದಾರರು ಭಾಗವಹಿಸಿದ್ದರು‌.

Megha News