ರಾಯಚೂರು. ದರ್ವೇಶ ಗ್ರೂಪ್ ಕಂಪನಿಯ ಮಾಲೀಕ ಮಹ್ಮದ್ ಹುಸೇನ್ ಶುಜ ಮೇಲೆ ಸೂಕ್ತ ಕಾನೂನು ಕ್ರಮ ಹಾಗೂ ಪ್ರಕರಣ ದಾಖಲಿಸಿ ಹಣ ಹೂಡಿಕೆ ಮಾಡಿದರವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸೇನೆ ವತಿಯಿಂದ ದರ್ವೇಶ ಗ್ರೂಪ್ ಕಂಪನಿಯ ಮುಂದೆ ಪ್ರತಿಭಟನೆ ನಡೆಸಿದರು.
ದರ್ವೇಶ ಕಂಪನಿಯಲ್ಲಿ ಸಾವಿರಾರು ಬಡ ಕುಟುಂಬದ ಜನರು ಸಾಲ ಮಾಡಿ, ಆಭರಣಗಳು ಮಾರಾಟ ಮಾಡಿ, ಹೆಚ್ಚಿನ ಬಡ್ಡಿ ಆಸೇಗೆ ಹೂಡಿಕೆ ಮಾಡಿದ್ದಾರೆ, ಶೇ 12 ರಿಂದ 15 ರಷ್ಟು ಬಡ್ಡಿ ನೀಡುವುದಾಗಿ ಸಾರ್ವಜನಿಕರಿಗೆ ನಂಬಿಸಿ ಕೋಟ್ಯಾಂತರ ರೂ ಹೂಡಿಕೆ ಮಾಡಿಕೊಂಡು ಇದೀಗ ಕೆಲವರಿಗೆ ಅಲ್ಪ ಪ್ರಮಾಣದಲ್ಲಿ ಹಿಂತಿರುಗಿಸಿ ಹೋಡಿ ಹೋಗಿದ್ದಾನೆ ಎಂದು ದೂರಿದರು.
ದರ್ವೇಶ ಗ್ರೂಪ್ ಕಂಪನಿಯಲ್ಲಿ ಏಜೆಂಟ್ ದಾರರು ತಮ್ಮಮ್ಮರಿಗೆ ಮಾತ್ರ ಹಾಗೂ ತೀವ್ರ ಆರೋಗ್ಯ ಸಮಸ್ಯೆ ಇದ್ದವರಿಗೆ ಮಾತ್ರ ಇಂತಿಷ್ಟು ಹಣ ಪಾವತಿಸಿದ್ದಾರೆ, ಇದೀಗ ಏಜೆಂಟ್‌ರೂ ಕಾಣೆಯಾಗಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿದರು.
ಹೂಡಿಕೆ ಮಾಡಿದ ಸಾರ್ವಜನಿಕರು ದೂರು ನೀಡಲು ಮುಂದೆ ಹೋದರೆ ಬೇದರಿಕೆ ಹಾಕುವುದು, ಹಣ ಹಿಂತಿರುಗಿಸಿ ಕೊಡುವುದಿಲ್ಲ ವೆಂದು ಹೆದರಿಸುತ್ತಿದ್ದಾರೆ. ಇದರಿಂದಾಗಿ ಹೂಡಿಕೆ ಮಾಡಿದವರು ದೂರು ನೀಡಲು ಮುಂದೆ ಬಂದಿಲ್ಲವೆಂದರು.
ಹೋರಾಟದ ಸ್ಥಳಕ್ಕೆ ಬೇಟಿ ನೀಡಿದ ಡಿಎಸ್‌ಪಿ ಸತ್ಯ ನಾರಾಯಣ ಅವರು ಪ್ರತಿಕ್ರಿಯಿಸಿ ದರ್ವೇಶ ಗ್ರೂಪ್ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ದೂರು ನೀಡಿದಲ್ಲಿ ಮುಂದು ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವೆಂದರು. ಒಂದು ಬಾರಿ ದೂರು ದಾಖಲಾದರೆ ಆರೋಪಿ ಎಲ್ಲೆ ಇದ್ದರೂ ಬಂಧನ ಮಾಡುವುದು ನಮ್ಮ ಕರ್ತವ್ಯವೆಂದರು.
ಹೂಡಿಕೆದಾರರು ಮುಂದೆ ಬರದೇ ಸಾರ್ವಜನಿಕ ಸಹಕಾರ ನೀಡಿದರೆ ಆರೋಪಿ ಬಂದಿಸಲು ಸುಲಭ, ಸಾರ್ವಜನಿಕರು ಸಹ ಪೋಲಿಸ್ ಇಲಾಖೆ ಜೊತೆಗೆ ಸಹಕಾರ ನೀಡಬೇಕೆಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜೊತೆ ಚರ್ಚಿಸಿ ಸಾರ್ವಜನಿಕರು ದೂರು ನೀಡಲು ಮುಂದೆ ಬರಬೇಕೆಂದ ಪ್ರಕಟಣೆ ಮೂಲಕ ತಿಳಿಸಲು ಚರ್ಚೆ ಮಾಡಿದ ಬಳಿಕೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಹೋರಾಟಗಾರರು ತಾತ್ಕಾಲಿಕವಾಗಿ ಹೋರಾಟ ಸ್ಥಗಿತಗೊಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಪಟ್ಟಿ, ಮಹೇಶ ಕುಮಾರ, ಈ.ಕುಮಾರಸ್ವಾಮಿ, ಕೆ.ಸಂತೋಷ, ಚಂದ್ರಶೇಖರ, ಗಂಗಾಧರ ಸೇರಿದಂತೆ ಅನೇಕರು ಇದ್ದರು.