ರಾಯಚೂರು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬರಬೇಕೆಂದು 2ನೆ ಹೆಚ್ಚುವರಿ ವ್ಯವಹಾರ ನ್ಯಾಯಾದೀಶರಾದ ಶ್ವೇತಾ ಸಿಂಗ್ ಹೇಳಿದರು.
ನಗರದ ಗಾಲಿಬ್ ಗ್ರಂಥಾಲಯದಲ್ಲಿ ಗಾಲಿಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ 2023-24ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಾಧನೆಗೆ ಕಾರಣರಾದ ಶಿಕ್ಷಕರು ಮತ್ತು ಪ್ರಾಚಾ ರ್ಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭ ದಲ್ಲಿ ಮಾತನಾಡಿದರು, ವಿದ್ಯಾರ್ಥಿಗಳು ಶಿಸ್ತಿ ನಿಂದ ಕಲಿಯಬೇಕು, ಶಿಕ್ಷಕರ ಮಾರ್ಗದರ್ಶನ ದಲ್ಲಿ ಮುನ್ನಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಸೈಯದ ತಾರೀಖ ಹಸನ್ ರಜ್ವೀ ವಕೀಲ ಮಾತನಾಡಿ ನಮ್ಮ ಟ್ರಸ್ಟ್ ಪ್ರತಿ ವರ್ಷ ನಗರದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿ ಕೊಂಡು ನಗದು ಬಹುಮಾನದೊಂದಿಗೆ ಸನ್ಮಾ ನಿಸಿ ಪುರಸ್ಕರಿಸುತ್ತ ಬಂದಿದೆ ಎಂದರು.
ನಗರದಲ್ಲಿ ಅತ್ಯಂತ ಹಳೆಯದಾದ ಗಾಲಿಬ್ ಮೆಮೋರಿಯಲ್ ಗ್ರಂಥಾಲಯ ಸರಕಾರದ ಯಾವುದೇ ಸಹಾಯವಿಲ್ಲದೇ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ, ನಮ್ಮ ಗ್ರಂಥಾಲ ಯದಲ್ಲಿ ಎಲ್ಲಾ ಭಾಷೆಯ ಸಾವಿರಾರು ಪುಸ್ತಕ ಗಳು ಲಭ್ಯವಿದ್ದಾವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸದಸ್ಯರಾದ ಅನ್ವರ ವಹೀದ, ಮಲ್ಲಿಕಾರ್ಜುನ ವಕೀಲರು, ನೂರು ಮೊಹಮ್ಮದ ವಕೀಲರು ಉಪಸ್ಥಿತರಿದ್ದರು.