Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ನವೋದಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಟ, ಓರ್ವ ವಿದ್ಯಾರ್ಥಿ ಗಂಭೀರ ಗಾಯ

ನವೋದಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಟ, ಓರ್ವ ವಿದ್ಯಾರ್ಥಿ ಗಂಭೀರ ಗಾಯ

ರಾಯಚೂರು. ನವೋದಯ ಕಾಲೇಜು ವೈದ್ಯ ಕೀಯ ವಿದ್ಯಾರ್ಥಿಗಳು ಕಟ್ಟಿಗಳಿಂದ ಪರಸ್ಪರ ಹೋಡೆದಾಡಿಕೊಂಡಿರುವ ಘಟನೆ ಮಂತ್ರಾಲಯ ರಸ್ತೆಯ ನವೋದಯ ಕ್ಯಾಂಪಸ್ ನಲ್ಲಿ ನಡೆದಿದೆ.

ತೆಲಂಗಾಣದ ನಾರಾಯಣಪೇಟೆ ಮಾಜಿ ಶಾಸಕ ಎಸ್ ಆರ್ ರೆಡ್ಡಿಯವರ ನವೋದಯ ಮೆಡಿಕಲ್ ಹಾಗೂ ಸಂಶೋಧನಾ ಸಂಸ್ಥೆಯ ಹಾಸ್ಟೆಲ್ ಇದಾಗಿದೆ.
ನವೋದಯ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌-5 ರಲ್ಲಿನ ಮೆಡಿಕಲ್‌ ಕಾಲೇಜು ಕ್ಯಾಂಪಸ್ ನಲ್ಲೇ ವಿದ್ಯಾರ್ಥಿಗಳ ಮಾರಾಮಾರಿ ಜಗಳ ಉಂಟಾಗಿದೆ.
ಒಬ್ಬರಿಗೊಬ್ಬರು ಪರಸ್ಪರವಾಗಿ ಬೆತ್ತ ದೊಣ್ಣೆ ಹಿಡಿದು ರಾತ್ರಿ ಹೊತ್ತು ಮನ ಬಂದಂತೆ ಹೊಡೆ ದಾಡಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ನವೋದಯ ಮೆಡಿಕಲ್ ಕಾಲೇಜ್‌ ರೀಗೇಲ್ ಕಾರ್ಯಕ್ರಮ ನಡೆದಿದೆ‌. ಕಾಲೇಜಿನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು.
ಪಾರ್ಟಿ ಮುಗಿಸಿಕೊಂಡು ಹಾಸ್ಟೆಲ್ ಗೆ ಬಂದ ಬಳಿಕ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಜಗಳ ಉಂಟಾಗಿದೆ, ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದು, ಒಬ್ಬ ವಿದ್ಯಾರ್ಥಿ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ.
ತಡರಾತ್ರಿ‌ ನಡೆದ ನವೋದಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಗಲಾಟೆಯಿಂದ ಸಾರ್ವಜನಿಕಲ್ಲಿ ಆತಂಕ ಉಂಟಾಗಿದೆ.

 

Megha News