ರಾಯಚೂರು. ವಕ್ಫ್ ಮಂಡಳಿ ಆಸ್ತಿ ಒತ್ತುವರಿ ಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಪ್ರಮುಖ ಮುಖಂಡರ ಹೆಸರು ಕೇಳಿ ಬಂದಿದ್ದು, 6000 ಪುಟಗಳ ವರದಿ ಸಲ್ಲಿಸಿದ್ದು ಅದರಲ್ಲಿ ಕಾಂಗ್ರೆಸ್ ಮುಖಂಡರ ಹೆಸರು ಬರೆದಿದ್ದಾರೆ ತನಿಖೆ ಆಗಬೇಕಿದೆ, ತನಿಖೆ ನಂತರ ಸತ್ಯ ಹೊರಬರಲಿದೆ ಎಂದು ರಾಯಚೂರಿನಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಭಾಷಾ ಹೇಳಿದರು.
ರಾಯಚೂರಿನಲ್ಲಿ ವಿವಿಧ ಮಸೀದಿ ಮತ್ತು ದ ಲರ್ಗಾಗಳಿಗೆ ಬೇಟಿ ನೀಡಿ ಮಾತನಾಡಿದರು,
ರಾಜ್ಯದಲ್ಲಿ ಈ ಹಿಂದೆ ಸಾಕಷ್ಟು ವಕ್ಫ್ ಮಂಡಳಿ ಯ ಆಸ್ತಿ ಒತ್ತುವರಿಯಾಗಿದ್ದು, ಬಿಜೆಪಿ ಸರ್ಕಾರದಲ್ಲಿ ವಕ್ಫ್ ಮಂಡಳಿ ರಾಜ್ಯಾದ್ಯಂತ ಸಮೀಕ್ಷೆ ಮಾಡಲಾಗಿತ್ತು, ಒತ್ತುವರಿಯಾಗಿದ್ದನ್ನು ತೆರವುಗೊಳಿಸಲಾಗಿದೆ, ಕೆಲ ದಿನಗಳ ಹಿಂದೆ ಕಲಬುರ್ಗಿಯಲ್ಲಿ 100 ಎರಕೆ ಆಸ್ತಿ ವಶಕ್ಕೆ ಪಡೆದಿದ್ದೇವೆ ಎಂದರು.
ಕಲಬುರಗಿಯಲ್ಲಿ ವಕ್ಫ್ ಆಸ್ತಿ ಒತ್ತುವರಿಗೆ ಸಂಬಂಧಿಸಿದಂತೆ ಅನ್ವರ್ ಮಾನ್ಪಡೆ ಅವರು ವರದಿ ಸಲ್ಲಿಸಿದ್ದಾರೆ, ಸುಮಾರು 6 ಸಾವಿರ ಪುಟಗಳ ವರದಿ ನೀಡಿದ್ದು, ಅದರಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಹೆಸರು ಬರೆದಿದ್ದಾರೆ, ತನಿಖೆ ಪೂರ್ಣಗೊಂಡಿಲ್ಲ, ನಡೆಯುತ್ತಿದೆ, ತನಿಖೆ ನಂತರ ಸತ್ಯಾ ಸತ್ಯತೆ ಹೊರ ಬರಲಿದೆ ಎಂದು ತಿಳಿಸಿದರು.
ರಾಯಚೂರಿನಲ್ಲಿ ಮಸೀದಿ ಮತ್ತು ದರ್ಗಾಗಳ
ಸ್ಥಳಗಳನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿದ ಅವರು, ರಾಯಚೂರಿನಲ್ಲೂ ಸಾಕಷ್ಟು ವಕ್ಫ್ ಆಸ್ತಿ ಒತ್ತುವರಿಯಾಗಿದೆ ಅದರ ವೀಕ್ಷಣೆ ಮಾಡುತ್ತಿದ್ದೇನೆ, ಸರ್ವೆ ನಂ 11/7 ನಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ, ಆ ಸ್ಥಳಕ್ಕೆ ಮಾಡಿ ಪರಿಶೀಲನೆ ನಡೆಸಲಾಗುತ್ತದೆ ನಂತರ ಜಿಲ್ಲಾಧಿಕಾರಿಗ ಳೊಂದಿಗೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.