ರಾಯಚೂರು. ಆದಿಥಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಆರಂಭಿಸಿದ್ದು, ಕಳೆದ 2 ವರ್ಷಗಳಲ್ಲಿ 107 ಗರ್ಭಿಣಿ ಮಹಿಳೆಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಲಾಗಿದೆ, ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗುಣಮಟ್ಟದ ಚಿಕಿತ್ಸೆಯೊಂದಿಗೆ ಬಡ ರೋಗಿಗಳಿಗೆ ಕಡಿಮೆ ವೆಚ್ಚ ಭರಿಸಲಾಗುತ್ತಿದೆ ಎಂದು ಅದಿಥಿ ಆಸ್ಪತ್ರೆಯ ಮುಖ್ಯಸ್ಥೆ ಡಾ. ದೀಪಾ ಹನುಮಸಾಗರ ಹೇಳಿದರು.
ನಗರದ ಅದಿಥಿ ಆಸ್ಪತ್ರೆಯಲ್ಲಿ 107 ಗರ್ಭಿಣಿ ಮಹಿಳೆಯರಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದು ಸಂಭ್ರಮಿಸಲಾಯಿತು.
ಆದಿಥಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಆರಂಭಿಸಿದ ಬಳಿಕ 2 ವರ್ಷಗಳಲ್ಲಿ 107 ಗರ್ಭಿಣಿ ಮಹಿಳೆಯರಿಗೆ ಯಶಸ್ಸಿಯಾಗಿ ಚಿಕಿತ್ಸೆ ಮಾಡಲಾಗಿದೆ, ಎಲ್ಲಾ ಮಕ್ಕಳು ಆರೋಗ್ಯದಿಂದ ಉಪಚರಿಸಿ ಕಳುಹಿಸಿಕೊಡಲಾಗುತ್ತದೆ ಎಂದರು.
ಆಸ್ಪತ್ರೆಗೆ ಹೆಚ್ಚಿನ ಗರ್ಭಿಣಿ ಮಹಿಳೆಯರು ಆಗಮಿಸಿದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಸಾಕಷ್ಟು ಪ್ರಮಾಣದಲ್ಲಿ ಆಸ್ಪತ್ರೆಗೆ ಪ್ರಚಾರವಿದೆ.
ಉತ್ತಮ ಗುಣಮಟ್ಟದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗುಣಮಟ್ಟದ ಚಿಕಿತ್ಸೆಯಿಂದಾಗಿ ಗ್ರಾಮೀಣ ಭಾಗದ ಜನರು ಸಹ ಈ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಾಕಷ್ಟು ಜನರು ಬಡತನದಲ್ಲಿದ್ದರೂ 1 ರಿಂದ 50 ಸಾವಿರ ಶುಲ್ಕ ಭರಿಸಲು ಸಾಧ್ಯವಿಲ್ಲ, ಅಂತಹದಲ್ಲಿ ಅನುಕೂಲವಾಗಲು ಕಡಿಮೆ ವೆಚ್ಚದಲ್ಲಿ ಹೆರಿಗೆ ಮಾಡಲಾಗುತ್ತದೆ, ಬೇರೆ ಖಾಸಗಿ ಆಸ್ಪತ್ರೆಗರ ಹೋಲಿಸಿದರೆ ಆದಿಥಿ ಆಸ್ಪತ್ರೆಯಲ್ಲಿ ಕಡಿಮೆ ಶುಲ್ಕ ಭರಿಸಲಾಗುತ್ತಿದೆ ಇನ್ನು ಹೆಚ್ಚಿನ ಜನರು ಬರಲು ತಿಳಿಸಿದರು.
ಮೊದಲ ಮೈಲಿಗಲ್ಲನ್ನು ಆಚರಿಸುತ್ತಿದ್ದು, ನಾವು ಇದನ್ನು ಬಹಳ ಕಡಿಮೆ ಅವಧಿಯಲ್ಲಿ ಸಾಧಿಸಿ ದ್ದೇವೆ. ಮತ್ತು ಈ ದೊಡ್ಡ ಯಶಸ್ಸಿಗಾಗಿ ನಮ್ಮ ಎಲ್ಲಾ ರೋಗಿಗಳ ಆಸ್ಪತ್ರೆ ಸಿಬ್ಬಂದಿ ಭ್ರೂಣ ಶಾಸ್ತ್ರಜ್ಞರ ತಂಡಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಶ್ವೇತಾ, ಡಾ.ಶರ್ಮಾ, ಡಾ.ಅಶ್ವಿನಿ, ಮಹಮದ್ ಅಜ್ಮಲ್ ಇಸ್ಮಾಯಿಲ್, ಸುರೇಶ ಇದ್ದರು.