Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ನರೇಗಾ ಯೋಜನೆ ಕೆಲಸಕ್ಕೆ ಮಕ್ಕಳ ಬಳಕೆ ಆರೋಪ, 4 ಜನ ಅಧಿಕಾರಿಗಳಿಗೆ ಸಮನ್ಸ್ ಜಾರಿ

ನರೇಗಾ ಯೋಜನೆ ಕೆಲಸಕ್ಕೆ ಮಕ್ಕಳ ಬಳಕೆ ಆರೋಪ, 4 ಜನ ಅಧಿಕಾರಿಗಳಿಗೆ ಸಮನ್ಸ್ ಜಾರಿ

ದೇವದುರ್ಗ.ನರೇಗಾ ಯೋಜನೆಯ ಕಾಮಗಾರಿಯೊಂದದರಲ್ಲಿ ಮಕ್ಕಳನ್ನು ಬಳಸಿಕೊಂಡ ಆರೋಪದ ಮೇಲೆ ನಾಲ್ವರು ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸಮನ್ಸ್ ಜಾರಿ ಮಾಡಿದೆ.

ತಾಲ್ಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಲಹಳ್ಳಿ ಪಟ್ಟಣದ ಸಾಮಾಜಿಕ ಕಾರ್ಯಕರ್ತ ಅಮರೇಶ ನಾಯಕ ಹಾಗೂ ವಕೀಲ ರಾಜಾ ವಾಸುದೇವ ನಾಯಕ ನೀಡಿದ ದೂರಿನ ಆಧಾರ ಮೇರೆಗೆ ಜಾಲಹಳ್ಳಿ ಗ್ರಾಮ ಪಂಚಾಯಿತಿಯ ಹಿಂದಿನ ಪಿಡಿಒ ಮಹೇಶ್ವರಿ, ತಾ.ಪಂ ಇಒ ಬಸವರಾಜ ಹಟ್ಟಿ, ತಾ.ಪಂ. ಯೋಜನಾ ನಿರ್ದೇಶಕ ಅಣ್ಣರಾವ್ ನಾಯಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿಗೆ ಸಮನ್ಸ್ ಜಾರಿ ಮಾಡಿ ಇಂದು ರಾಯಚೂರಿನ ಸರ್ಕಾರಿ ವೀಕ್ಷಣಾಲಯ ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ನರೇಗಾ ಕಾಮಗಾರಿಯೊಂದರಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಹಾಜರಾತಿ ಹಾಕಿರುವ ಬಗ್ಗೆ ಏಪ್ರಿಲ್ 6 ರಂದು ಬಾಲಕರ ಭಾವಚಿತ್ರ ಸಮೇತವಾಗಿ ಅಪ್‌ ಲೋಡ್ ಮಾಡಲಾಗಿದೆ’ ಎಂದು ಏ.13 ರಂದು ಸಾಮಾಜಿಕ ಕಾರ್ಯಕರ್ತ ಅಮರೇಶ ನಾಯಕ ದಾಖಲೆ ಸಮೇತ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಸಮನ್ಸ್ ಜಾರಿಮಾಡಿದ್ದಾರೆ.

Megha News