ರಾಯಚೂರು. ತಮ್ಮ ಆಧ್ಯಾತ್ಮಿಕ ಚಿಂತನೆಗಳಿಂದ ಸಮ ಸಮಾಜವನ್ನು ಕಟ್ಟುವಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಅಪಾರವಾದದ್ದು ಎಂದು ತಹಶೀಲ್ದಾರ ಸುರೇಶ ವರ್ಮಾ ಅವರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದ ರಾಜರ ಆಡಳಿತ ವ್ಯವಸ್ಥೆಯಲ್ಲಿ ಸಮ ಸಮಾಜವನ್ನು ಕಟ್ಟುವ, ಸುಧಾರಿಸುವಲ್ಲಿ ಮತ್ತು ಕಾಯಕ ನಿಷ್ಠೆಯ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಜಾತಿ ಬೇದಗಳೆನ್ನದೇ ಎಲ್ಲರೂ ಸಮಾನರು ಎಂಬ ಸಂದೇಶವನ್ನು ನೀಡದವರು ಸಿದ್ದರಾಮೇಶ್ವರರು ಅವರ ತತ್ವಾದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದಾಗ ಮಾತ್ರ ಅವರು ಸುಂದರ ಭವಿಷ್ಯವನ್ನು ಕಾಣಲು ಸಾಧ್ಯವಾಗುತ್ತದೆ ಜೊತೆಗೆ ಬದಲಾವಣೆಯೂ ಸಾಧ್ಯ ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.
ಇದೇ ವೇಳೆ ತುರಕನಡೋಣ ಶಿಕ್ಷಕ ಆಂಜಿನೇಯ್ಯ ಉಪನ್ಯಾಸ ನೀಡಿ ಭಾರತ ದೇಶ ಶರಣರು, ಸಂತರು, ತತ್ವಜ್ಞಾನಿಗಳು, ಚಿಂತಕರು ಹಾಗೂ ಋಷಿಮುನಿಗಳು ಹುಟ್ಟಿದ ಪುಣ್ಯಭೂಮಿಯಾಗಿದ್ದು, ಇಂತಹ ನಾಡಿನಲ್ಲಿ ಸಿದ್ದರಾಮೇಶ್ವರರು ಜನಿಸಿ ಸಮಾಜಕ್ಕೆ ಉತ್ತಮ ಮಾರ್ಗ ಹಾಕಿಕೊಟ್ಟಿದ್ದಾರೆ ಎಂದರು.
ಬಾಲ್ಯದಿಂದಲೂ ದೈವತ್ವದ ಮಾರ್ಗದಲ್ಲಿ ನಡೆದಿದ್ದ ಸಿದ್ದರಾಮೇಶ್ವರರು, ಬಾಲ್ಯದಿಂದಲೇ ಉತ್ತಮ ಜ್ಞಾನವನ್ನು ಪಡೆದು ನಾಡಿಗೆ ಹೆಸರುವಾಸಿಯಾದವರಾಗಿದ್ದು, ಸಿದ್ದರಾಮೇಶ್ವರರಂತೆ ಜ್ಞಾನಿಯಾಗಲು ಮಕ್ಕಳಿಗೆ ಉತ್ತಮ ಜ್ಞಾನದ ಅವಶ್ಯಕತೆಯಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ.ವೆಂ ನಾಯಕ, ಸಮಾಜದ ಮುಖಂಡ ರಾದ ಅಲ್ಕೂರ ರಾಮು, ಹನುಮಂ ತಪ್ಪ, ಶಶಿಕಲಾ ಭೀಮರಾಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.