ರಾಯಚೂರು/ಶಕ್ತಿನಗರ: ಪ್ರಸ್ತುತ ದಿನಮಾನಗಳಲ್ಲಿ ಒತ್ತಡ ಮತ್ತು ಬಿಡುವಿಲ್ಲದ ಇಂಜಿನೀಯರ ಮತ್ತು ಸಿಬ್ಬಂದಿಗಳ ಬದುಕಿಗೆ ಪರಿಣಾಮಕಾರಿ ನಿರ್ವಹಣೆಯಂತಹ ತರಬೇತಿಗಳು ಸಹಾಯ ಮಾಡಬಲ್ಲವು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಬೂಬ ಜಿಲಾನಿ ಅವರು ಹೇಳಿದರು.
ತಾಲೂಕಿನ ಶಕ್ತಿನಗರದಲ್ಲಿ ಕ್ಯಾಷುಟೆಕ್ ನಿರ್ಮಿತಿ ಕೇಂದ್ರ, ಭಾರತ ರತ್ನ ಸರ್.ಎಮ್ ವಿಶ್ವೇಶ್ವರಾಯ ರಾಷ್ಟ್ರೀಯ ತಾಂತ್ರಿಕ ಕೌಶಲಾಭಿವೃದ್ಧಿ ಸಂಸ್ಥೆ ಮುದ್ದೇನಹಳ್ಳಿ, ಇವರ ಸಂಯುಕ್ತಾಶಯದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ನಿರ್ಮಾಣದಲ್ಲಿ ಪರಿಣಾಮಕಾರಿ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಟ್ಟಡ ನಿರ್ಮಾಣದಲ್ಲಿ ಪರಿಣಾಮಕಾರಿ ನಿರ್ವಹಣೆ ಕುರಿತು ಒಂದು ದಿನದ ತಾಂತ್ರಿಕ ಕೌಶಲ, ಅಭಿವೃದ್ಧಿ ಕುರಿತು ನುರಿತ ಮತ್ತು ಅನುಭವವುಳ್ಳ ಚಿಕ್ಕಬಳ್ಳಾಪುರ ಶಾ-ಶಿಬ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸಿದ್ದೇಗೌಡ ಹಾಗೂ ನಿರ್ವಹಣಾ ಕೌಶಲ್ಯ ಅಭಿವೃದ್ಧಿ ಕುರಿತು ಚಿಕ್ಕಬಳ್ಳಾಪುರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಪಂಕಜಾಕ್ಷಿ ಆರ್, ಕ್ಯಾಷುಟೆಕ್ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಪಟ್ಟೇದ, ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಕ್ಯಾಷುಟೆಕ್ ಮತ್ತು ರಾಯಚೂರು ಜಿಲ್ಲಾ ನಿರ್ಮಿ ಕೇಂದ್ರದ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳು ಭಾಗವಹಿಸಿ ಇದರ ಪ್ರಯೋಜನೆಯನ್ನು ಪಡೆದರು.
ಈ ಸಂದರ್ಬದಲ್ಲಿ ಸೆಡಾಕ ಜಂಟಿ ನಿರ್ದೇಶಕ ಜಿ.ಯು ಹುಡೇದ್, ರಾಯಚೂರು ಜಿಲ್ಲಾ ನಿರ್ಮಿತಿ ಕೇಂದ್ರದ ವಿಶೇಷ ಅಧಿಕಾರಿ ಗಣಪತಿ ಸಾಖ್ರೆ, ಯೋಜನಾ ವ್ಯವಸ್ಯಾಪಕರುಗಳಾದ ವೆಂಕಟೇಶ ಸಿಂಗ್ ಹಜಾರೆ ಮತ್ತು ಮಹಿಬೂಬ ಮುಲ್ಲಾ, ತರಬೇತಿ ಸಲಹೆಗಾರ ಬಾಲಚಂದ್ರ ಜಾಬಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.