ರಾಯಚೂರು. ಅಪ್ರಾಪ್ತ ಬಾಲಕಿಯನ್ನ ಸೋನುಗೌಡ ಅವರು ಆಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂ ರಿನ ಬ್ಯಾಡರಹಳ್ಳಿ ಪೊಲೀಸರಿಂದ ಮಹಜರು ಮಾಡಲು ಆಗಮಿಸಿದ್ದು ಈ ವೇಳೆ ಗ್ರಾಮಸ್ಥರು ಸೋನುಗೌಡ ಅವರ ಮೇಲೆ ಕಲ್ಲು ತೋರಾಟ ನಡೆಸಿದ ಘಟನೆ ನಡೆದಿದೆ.
ಜಿಲ್ಲೆಯ ಮಸ್ಕಿ ತಾಲ್ಲೂಕಿನ ಕಾಚಾಪುರ ಗ್ರಾಮದಲ್ಲಿ ಬ್ಯಾಡರಹಳ್ಳಿ ಪೋಲಿಸರು ಮನೆ ಮತ್ತು ಹೋಡಾಡಿದ ಸ್ಥಳ ಮಹಜರು ಮಾಡಲು ಆಗಮಿಸಿದ್ದರು, ಆರೋಪಿತೆ ಸೋನುಗೌಡ ಅವರನ್ನು ಪೋಲಿಸರು ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು.
ಮಗು ಪಡೆದುಕೊಂಡು ಹೋದ ಸ್ಥಳ, ಗ್ರಾಮ ದಲ್ಲಿ ಓಡಾಡಿದ ಸ್ಥಳಗಳಲ್ಲಿ ಸ್ಥಳ ಮಹಜರು ಮಾಡಲು ಆಗಮಿಸಿದ ವೇಳೆ ಗ್ರಾಮಸ್ಥರು ಸೋನುಗೌಡ ಅವರ ಬೆನ್ನತ್ತಿ ಕಲ್ಲು ತೋರಾಟ ನಡೆಸಿದರು, ಈ ವೇಳೆ ಅವರು ಕಾರಿನಲ್ಲಿ ತಪ್ಪಿಸಿಕೊಂಡು ಹೋಡಿ ಹೋದರೂ ಆದರೂ ಸಹ ಗ್ರಾಮಸ್ಥರು ಕಾರಿನ ಹಿಂದೆ ಬೆನ್ನತ್ತಿ ಕಲ್ಲು ತೋರಾಟ ನಡೆಸಿದರು.
ಸೋನುಗೌಡ ಅವರು ಬಾಲಕಿಯನ್ನು ದತ್ತು ಪಡೆದು ಗ್ರಾಮದಿಂದ ಕರೆದುಕೊಂಡು ಹೋಗಿದ್ದರ ಬಗ್ಗೆ ಪೋಲಿಸರು ವಿಚಾರಣೆ ನಡೆಸಿದರು.
ಅಪ್ರಾಪ್ತ ಬಾಲಕಿಯ ಪೋಷಕರಿಗೆ ಬೆಂಗಳೂರಿಗೆ ವಿಚಾರಣೆಗೆ ಬರುವಂತೆ ಬ್ಯಾಡರಹಳ್ಳಿ ಪೊಲೀಸ ರಿಂದ ತಿಳಿಸಿದ್ದರಿಂದ ಕಳೆದ ರಾತ್ರಿಯೇ ಪೋಷಕರು ತೆರಳಿದರು.