ರಾಯಚೂರು. ರಸ್ತೆ ಮದ್ಯದಲ್ಲಿ ಡಿವೈಡರ್‌ನ ಕಲ್ಲು ಹೊಡದು ರಸ್ತೆಯಲ್ಲಿ ಬಿದ್ದಿದ್ದರಿಂದ ವಾಹ ನಗಳ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ಇವುಗಳನ್ನು ತೆರವುಗೊಳಿಸಿ ಸರಿಪಡಿಸಬೇಕಾದ ನಗರಸಭೆ ಮಾತ್ರ ತನ್ನ ಜವಾಬ್ದಾರಿ ಮರೆತಿದ್ದಾರೆ.
ಸಂಚಾರಕ್ಕೆ ತೊಂದರೆಯನ್ನು ತಪ್ಪಿಸಲು ಪೋಲಿ ಸರು ಮುಂದಾಗಿ ತೆರವುಗೊಳಿಸಿದ್ದಾರೆ.
ನಗರದ ಬಸವೇಶ್ವರ ವೃತ್ತದಲ್ಲಿನ ಡಿವೈಡರ್ ಸಿಮೆಂಟ್ ಹೊಡೆದು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿವೆ ಇದರಿಂದಾಗಿ ಸಾರ್ವಜನಿಕರ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಅನುಭ ವಿಸುವಂತಾಗಿದೆ.
ಡಿವೈಡರ್ ಒಡೆದು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಹಲವು ದಿನಗಳಾದರೂ ಅದನ್ನು ತೆರವುಗೊಳಿ ಸುವಂತೆ ನಗರಸಭೆ ಅಧಿಕಾರಿಗಳಿಗೆ ಪೊಲೀ ಸರು ಮಾಹಿತಿ ನೀಡಿದ್ದಾರೆ. ಆದರೆ ತೆರವುಗೊ ಳಿಸಲು ನಿರ್ಲಕ್ಷ್ಯ ವಹಿಸಿದ್ದು, ವಾಹನ ಸಚಾರರು ತೊಂದರೆ ಅನುಭವಿಸುವಂತಾಗಿದೆ. ವಾಹನ ಸವಾರರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಟ್ರಾಫಿಕ್ ಪೊಲೀಸರು ಮುಂದಾಗಿ ತೆರವುಗೊಳಿಸಿದ್ದಾರೆ ಟ್ರಾಫಿಕ್ ಪೋಲಿಸ್ ಈರಪ್ಪ ಜಾದವ್, ಮತ್ತು ಸಿದ್ದಲಿಂಗಪ್ಪ ನಾಯಕ ಅವರು ಮಾನವೀಯತೆ ಮೆರೆದು ಅವುಗಳನ್ನು ತೆಗೆದು ಹಾಕಿದ್ದಾರೆ.
ನಗರಸಭೆ ಮಾಡುವ ಕೆಲಸವನ್ನು ಟ್ರಾಫಿಕ್ ಪೊಲೀಸರು ಮಾಡುತ್ತಿರುವುದು ವಾಹನ ಸವಾ ರರು ಟ್ರಾಫಿಕ್ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಜವಾಬ್ದಾರಿಯನ್ನು ಮರೆತ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.