ರಾಯಚೂರು. ಬಸ್‌ನಲ್ಲಿ ಪ್ರಯಾಣಿಕರೊಬ್ಬ ಅವಸರಿಂದ ಇಳಿಯುವಾಗ 2 ಲಕ್ಷ 50 ಸಾವಿರ ರೂ ಇರುವ ಬ್ಯಾಗ್ ಬಿಟ್ಟಿದ್ದು, ಬಸ್ ಚಾಲಕ ಮತ್ತು ಕಂಡಕ್ಟರ್ ಅದನ್ನು ಪ್ರಯಾಣಿಕನಿಗೆ ತಲುಪಿಸಿ ಪ್ರಾಮಾಣಿ ಕತೆ ಮೆರೆದಿದ್ದಾರೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಣ ಕಳೆದುಕೊಂಡ ಸೋಮಶೇಖರ್ ಪಾಟೀಲ್ ಇವರಿಗೆ ಕೇಂದ್ರ ಬಸ್ ನಿಲ್ದಾಣದ ಅಧಿಕಾರಿ ಶೀಲಪ್ಪ ಮೂಲಕ ಮಂಜುನಾಥ ನವಲಗುಂದ, ಮತ್ತು ಕಂಡಕ್ಟರ್ ಇವರು ಹಂತ್ತಾಂತರಿಸಿದರು.
ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ತೆರಳುವ ಬಸ್‌ನಲ್ಲಿ ಮಾನವಿ ಬಸ್ ನಿಲ್ದಾಣದಿಂದ ರಾಯಚೂರುಗೆ ಬರುತ್ತಿದ್ದ ಪ್ರಯಾಣಿಕ ಸೋಮಶೇಖರ್ ಪಾಟೀಲ್ ಅವರು ಗಡಿಬಿಡಿಯಲ್ಲಿ ರಾಯಚೂರುಲಿನಲ್ಲಿ ಇಳಿಯುವಾಗ 2 ಲಕ್ಷ 50 ಸಾವಿರ ರೂ. ಇರುವ ಬ್ಯಾಗ್ ಮರೆತು ಇಳಿದ್ದಿದ್ದಾರೆ.
ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರು ಇಳಿದ ಮೇಲೆ ಕಂಡಕ್ಟರ್ ಬಸ್ ಪರಿಶೀಲನೆ ಮಾಡಿದ್ದಾರೆ. ಹಣದ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ ನೀಡಿದಾಗ ಹಣವಿದ್ದು, ಬ್ಯಾಂಕ್ ಪಾಸ್‌ಪುಸ್ತಕ ಅವರ ಮೊಬೈಲ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ರಾಯಚೂರು ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದೆವು ಇಂದು ಅವರಿಗೆ 2 ಲಕ್ಷ ರೂ ಹಸ್ತಾಂತರ ಮಾಡಲಾಗಿದೆ ಎಂದು ಡ್ರೈವರ್ ಮಂಜುನಾಥ ನವಲಗುಂದ ತಿಳಿಸಿದರು.
ಈ ವೇಳೆ ಸೋಮಶೇಖರ್ ಪಾಟೀಲ್ ಅವರು ಪ್ರತಿಕ್ರಿಯಿಸಿ ಬಸ್‌ನಲ್ಲಿ ಅವಸರದಲ್ಲಿ ಹಣ ಬಿಟ್ಟು ಹೋಗಿದ್ದು ನೋಡಿ ಅದನ್ನು ಒಪ್ಪಿಸಿ ಮಾನವೀ ಯತೆ ಮೆರದಿದ್ದಾರೆ. ಅವರಿಗೆ ಧನ್ಯವಾದಗಳು ಸಲ್ಲಿಸಿದರು.