ರಾಯಚೂರು.ದರ್ವೇಶ ಕಂಪನಿಯಿಂದ ಸಾರ್ವಜನಿಕರಿಗೆ ವಂಚನೆ ಪ್ರಕರಣದಡಿಯಲ್ಲಿಆ ರೋಪಿಗಳು ಸಲ್ಲಿಸಿದ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ 4 ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ದರ್ವೇಶ ಗ್ರೂಪ್ ಕಂಪನಿಯವರು ಸಾರ್ವಜನಿ ಕರಿಗೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಸಾವಿರಾರು ಜನರಿಂದ ನೂರಾರು ಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡದೇ ಮೋಸ ಮಾಡಿದ್ದಾರೆ. ಕಂಪನಿ ವಿರುದ್ದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ
ಪ್ರಕರಣದಲ್ಲಿ ಬಂಧಿತ ಆರೋಪಿತರಾದ ಬಬ್ಲೂ @ ಮಹ್ಮದ್ ಶಾಮೀದ್ ಅಲಿ, ಅಜರ್ ಪಾಷ, ಸೈಯದ್ ಮೌಸಿನ್, ಶೇಖ್ ಮುಜಾಮಿಲ್ ಹಾಗೂ ಮಹ್ಮದ್ ವಸೀಂ @ ಮೆಡಿಕಲ್ ವಸೀಂ ಇವರು ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ತಲೆಮರೆಸಿಕೊಂಡ ಹಾಗೂ ಪ್ರಕರಣದ ಪ್ರಮುಖ ಆರೋಪಿತರಾದ ಮಹ್ಮದ್ ಹುಸೇನ್ ಶುಜಾ, ಸೈಯದ್ ವಸೀಂ, ಸೈಯದ್ ಮಿಸ್ಕಿನ್ ಇವರು ಸಹ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲ ಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯವು ಆರೋಪಿತರು ಸಲ್ಲಿಸಿದ ಒಟ್ಟು 4 ಜಾಮೀನು ಅರ್ಜಿಗಳನ್ನು ಪರಿಶೀಲಿಸಿ ಆರೋಪಿತರ ಪರ ಮತ್ತು ಸರ್ಕಾರದ ಪರ ವಾದ-ವಿವಾದಗಳನ್ನು ಆಲಿಸಿದ ನಂತರ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ಆದೇಶಿಸಿದೆ.
ವಿಶೇಷ ಅಭಿಯೋಜಕರಾಗಿ ಮಸ್ಕಿ ನಾಗರಾಜ್ ಇವರನ್ನು ನಿಯೋಜಿಸಲಾಗಿತ್ತು. ಅವರು ಸರ್ಕಾರದ ಪರ ವಾದ ಮಂಡಿಸಿದರು.