ರಾಯಚೂರು. ಕಾಂಗ್ರೆಸ್ ನವರು ಚೊಂಬು ಕೊಟ್ಟಿದ್ದಾರೆಂದು ಹೇಳಿದ್ದು, ಅಕ್ಷಯ ಪಾತ್ರೆ ಅದು, ಆದರೆ ಇವರು ಖಾಲಿ ಚಿಪ್ಪು ಕೊಟ್ಟಿದ್ದಾರೆಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಶಾಸಕ ಶಿವರಾಮ ಪಾಟೀಲ್ ಕಿಡಿ ಕಾರಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 9 ತಿಂಗಳ ಗತಿಸಿದೆ, ವಿಧಾನಸೌಧ ದಲ್ಲೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದರು, ಅವರೇ ತಿರುಗಾಡುತ್ತಿದ್ದಾರೆ, ಇನ್ನು ಗಲ್ಲಿಗಳ ಪರಿಸ್ಥಿತಿ ನೀವೇ ಊಹಿಸಬಹುದು ಎಂದರು.
ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಏನಾಗಿದೆ ಎಂಬುದು ಬಯಲಾಗಿದೆ, ಜನರು ಆಲೋಚನೆ ಮಾಡುತ್ತಿದ್ದಾರೆ, ಯಾವ ಸರ್ಕಾರವಿದ್ದಾಗ ಎಂತಹ ಘಟನೆಗಳು ನಡೆದಿವೆ ಎಂದು, ಈಗ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಎಂತಹ ಘಟನೆಗಳು ನಡೆದಿವೆ, ಜನರು ಇವುಗಳನ್ನೆಲ್ಲವನ್ನು ಗಮನಿಸುತ್ತಿದ್ದಾರೆ, ರಾಜ್ಯಕ್ಕೆ ಬಿಜೆಪಿ ಅವರು ಚೊಂಬು ಕೊಟ್ಟಿದ್ದಾರೆ ಹೇಳಿದ್ದು ಅದು ನಮಗೆ ಅಕ್ಷಯ ಪಾತ್ರೆ, ಆದರೆ ಇವರು ಕಾಲಿ ಚಿಪ್ಪು ಕೊಟ್ಟಿದ್ದಾರೆಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿ ಕಾರಿದರು.