ರಾಯಚೂರು,ಮೇ.೨೬- ಜಿಲ್ಲೆಯ ಮಸ್ಕಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ಬಾಣಂತಿ ಸಾವೀಗಿಡಾಗಿದ್ದಾಳೆ ಎಂದ ಆಕ್ರೋಸ ಭರಿತರಾದ ಕುಟುಂಬಸ್ಥರು ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿ ಆಸ್ಪತ್ರೆ ಅಂಬುಲೈನ್ಸ್ ಧ್ವಂಸಗೊಳಿಸಿದ ಘಟನೆ ಜರುಗಿದೆ.
ಮಸ್ಕಿ ಪಟ್ಟಣದ ಸಿದ್ದಮ್ಮ( 23) ಬಾಣಂತಿಯನ್ನು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಣಂತಿ ಸಾವು ಸಂಬವಿರುವ ಮಾಹಿತಿ ಹರಡುತ್ತಿದ್ದಂತೆ ನೂರಾರು ಜನ ಆಸ್ಪತ್ರೆ ಮುಂದೆ ಜಮಾವಣೆಗೊಂಡು ಕಲ್ಲುಗಳಿಂದ ಅಂಬುಲೆನ್ಸ್ ವಾಹನ ಗಾಜು ಒಡೆದು ಹಾಕಿದ್ದರು.
ಸ್ತ್ರೀರೋಗ ತಜ್ಞರಾದ ಡಾ.ಸೌಮ್ಯ ಗುಂಡಳ್ಳಿ ನಿರ್ಲಕ್ಷ್ಯವೇ ಘಟನೆ ಕಾರಣವೆಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯನ್ನು ಬಂದ್ ಮಾಡುವಂತೆ ಒತ್ತಾಯಿಸಿದರು. ಘಟನೆಯಿಂದ ಉದ್ರಿಕ್ತ ಪರಸ್ಥಿತಿ ನಿರ್ಮಾಣವಾಗಿತ್ತು.ಸ್ಥಳಕ್ಜೆ ಪೊಲೀಸರು ಆಗಮಿಸಿ ನಿಯಂತ್ತಿಸಲುವಯತ್ನಿಸಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಭೇಟಿ,ಪರಿಶೀಲನೆ ನಡೆಸಿದ್ದಾರೆ.ಬಾಣಂತಿ ಸಾವಿಗೆ ಕಾರಣ ಗೊತ್ತಾಗಿಲ್ಲ. ಬಿಗು ವಾತಾ