ರಾಯಚೂರು, ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿಒಂದೇ ಕುಟುಂವ ನಾಲ್ಕು ಜನ ಸಾವಿಗೀಡಾದ ಧಾರುಣ ಘಟನೆ ವರದಿಯಾಗಿದೆ.
ನಿನ್ನೆ ರಾತ್ರಿ ಊಟ ಸೇವಿಸಿ ಮಲಗಿದ್ದವರು ಇಹಲೋಕ ತ್ಯಜಿಸಿದ್ದಾರೆ. ಫುಡ್ ಪ್ಯಾಜನ್ (ವಿಷವಾದ ಆಹಾರ)ದಿಂದ ನಾಲ್ಕುಜನ ಮೃತ ಪಟ್ಟಿದ್ದು ಇನ್ನೊಬ್ಬರು ಜೀವನ್ಮರಣದೊಂದಿಗೆ ಹೋರಾಟ ಮಾಡುತ್ತಿದ್ದಾರೆ.
ಮೃತ ಪಟ್ಟವರನ್ನು ಭೀಮಣ್ಣ(೬೨),ಪತ್ನಿ ಈರಮ್ಮ(೫೮),ಮಲ್ಲೇಶ(೨೩),ಪಾರ್ವತಿ(೧೮) ಗುರುತಿಸಲಾಗಿದೆ.ಸಿರವಾರ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.ಕುಡಕ ಮಗ ಊಟದಲ್ಲಿ ವಿಷಬಹಾಕಿ ಘಟನೆಗೆ ಕಾರಣವಾಗಿದ್ದಾನೆ ಎಂದು ಹೇಳಲಾಗುತ್ತಿದೆ. ತನಿಖೆಯಿಂದಷ್ಟೆ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ.
ಘಟನೆಯಿಂದ ಇಡಿ ಗ್ರಾಮವೇ ದಿಗ್ಬ್ರಾಂತಗೊಂಡಿದೆ.