Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಹೊಸ ವರ್ಷಕ್ಕೆ ಜಿಲ್ಲಾಡಳಿತ ಭವನ ಉದ್ಘಾಟನೆ ಸಿದ್ದತೆ: ಮೂಲಭೂತ ಸೌಕರ್ಯಗಳ ಕೊರತೆ- ಒತ್ತಡಕ್ಕೆ ಸಿಲುಕಿದ ಜಿಲ್ಲಾಡಳಿತ

ಹೊಸ ವರ್ಷಕ್ಕೆ ಜಿಲ್ಲಾಡಳಿತ ಭವನ ಉದ್ಘಾಟನೆ ಸಿದ್ದತೆ: ಮೂಲಭೂತ ಸೌಕರ್ಯಗಳ ಕೊರತೆ- ಒತ್ತಡಕ್ಕೆ ಸಿಲುಕಿದ ಜಿಲ್ಲಾಡಳಿತ

ರಾಯಚೂರು. ನೂತನ ಜಿಲ್ಲಾಡಳಿತ ಭವನ ಕಾಮಗಾರಿ ಅಪೂರ್ಣವಾಗಿದ್ದು, ಆದರೇ ಜಿಲ್ಲಾಡಳಿತ ನೂತನ ಜಿಲ್ಲಾಡಳಿತ ಭವನ ಉದ್ಘಾಟನೆಗೆ ಸಕಲ ಸಿದ್ದತೆ ಕೈಗೊಂಡಿದೆ.

ಜಿಲ್ಲಾಡಳಿತ ಭವನ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಮೂಲಭೂತ ಸೌಕರ್ಯಗಳ ಸಹ ಸಾಕಷ್ಟು ಕಾಮಗಾರಿಗಳು ಬಾಕಿ ಇದೆ, ಜಿಲ್ಲಾಡಳಿತ ಮಾತ್ರ ಇವುಗಳನ್ನು ಬದಿಗಿಟ್ಟು ಸ್ಥಳಾಂತರ ಮಾಡಲು ಸಿದ್ದತೆಗೆ ಮುಂದಾಗಿರುವದು ಜಿಲ್ಲಾಡಳಿತ ಒತ್ತಡಕ್ಕೆ ಸಿಲುಕಿದಂತಾಗಿದೆ.
ಯಕ್ಲಾಸಪುರ ಸಮೀಪದ ೧೮ ಎಕರೆ ಜಮೀನಿನಲ್ಲಿ ೨೫ ಕೋಟಿ ವೆಚ್ಚದಲ್ಲಿ ಹೊಸದಾಗಿ ಜಿಲ್ಲಾಡಳಿತ ಭವನ ನಿರ್ಮಿಸಲಾಗಿದೆ. ಜಿಲ್ಲಾಡಳಿತ ಭವನ ಸ್ಥಳ ಗುರುತು ಸೇರಿದಂತೆ ಆರಂಭದಿಂದಲೂ ಪರ-ವಿರೋಧಗಳು ನಡುವೆ ಸ್ಥಳ ಗುರುತಿಸಿ ಜಿಲ್ಲಾಡಳಿತ ಭವನದ ಕಾಮಗಾರಿ ಮಾಡಲು ಸುಮಾರು ೧೦ ರಿಂದ ೧೫ ವರ್ಷವಾಯಿತು. ಇದೀಗ ಭವನ ಸಂಪೂರ್ಣ ಮುಗಿದಿದೆ. ಜಿಲ್ಲಾಡಳಿತ ಭವನ ನಿರ್ಮಾಣ ಪೂರ್ಣಗೊಂಡಿದೆ, ಹೊಸ ವರ್ಷ ಜನವರಿ ಮೊದಲ ವಾರದಲ್ಲಿ ಸ್ಥಳಾಂತರ ಮಾಡಿ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಆಯ್ದ ೧೦ಕ್ಕೂ ಹೆಚ್ಚು ಇಲಾಖೆಗಳು ಸ್ಥಳಾಂತರಗೊಳಿಸಾಗುತ್ತಿದೆ, ಆದರೆ ಜಿಲ್ಲಾಡಳಿತ ಹೊಸ ಭವನದ ಆವರಣದಲ್ಲಿ ಸಾಕಷ್ಟು ಕಾಮಗಾರಿ ಗಳು ಬಾಕಿ ಇದೆ, ಇದರ ಮಧ್ಯಯೂ ಜಿಲ್ಲಾಡಳಿತ ಭವನ ಆರಂಭಿಸಲು ಸಿದ್ದತೆ ಕೈಗೊಂಡಿರುವುದು ಸಾರ್ವಜನಿಕ ಕೆಂಗಣ್ಣಿಗೆ ಜಿಲ್ಲಾಡಳಿತ, ಮತ್ತು ಜನಪ್ರತಿನಿಧಿಗಳು ಗುರಿಯಾಗಿದ್ದಾರೆ.
ಜಿಲ್ಲಾಡಳಿತ ಭವನಕ್ಕೆ ಹೋಗುವ ರಸ್ತೆ ನಿರ್ಮಾಣ ಮಾಡಿಲ್ಲ, ಚರಂಡಿ ಕಾಮಗಾರಿ ಸಾಕಷ್ಟು ಬಾಕಿ ಇದೆ, ಇನ್ನು ಮುಂಭಾಗದಲ್ಲಿ ಬೃಹತಾದ ತೆರೆದ ಚರಂಡಿ ರಾಜ ಕಾಲುವೆ ಜಿಲ್ಲಾಡಳಿತ ಭವನಕ್ಕೆ ದರ್ಶನ ನೀಡುತ್ತಿದೆ, ರಸ್ತೆ, ಚರಂಡಿ ಕಾಲುವೆ, ವಾಹನಗಳ ನಿಲುಗಡೆ ಸೇರಿ ದಂತೆ ಸಾಕಷ್ಟು ಕೆಲಸ ಭಾಕಿ ಇದೆ, ಜೊತೆಗೆ ಜಿಲ್ಲಾಡಳಿತ ಕಟ್ಟಡದ ಕಾಮಗಾರಿ ಕಳಪೆಯಾಗಿದ್ದರಿಂದ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿದೆ.
ಸುಣ್ಣ-ಬಣ್ಣ, ಜಂಗಲ್ ಕಟ್ಟಿಂಗ್, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗುಣಟ್ಟದ ಅಂತರ್ಜಾಲ ಸೇವೆ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡಲು ಅಂತಿಮ ಹಂತದ ಕೆಲಸ ಕಾರ್ಯಗಳು ಭರದಿಂದ ಸಾಗಿದರೂ ಜನವರಿಯಲ್ಲಿ ಸ್ಥಳಾಂತರ ಮಾಡಲು ಸಾಧ್ಯ ವಿಲ್ಲವೆಂಬತಾಗಿದೆ. ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಜಿಲ್ಲಾಡಳಿತ ಭವನ ಇದು ಹಲವು ದಶಕಗಳ ಕನಸಾಗಿತ್ತು, ಭವಿಷ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಭವನದ ಎಲ್ಲಾ ಕಾಮಗಾರಿಗಳು ಗುಣಮಟ್ಟದಲ್ಲಿ ನಿರ್ಮಿಸಿ ಸ್ಥಳಾಂತರ ಮಾಡುವುದು ಸೂಕ್ತವಾಗಿದೆ, ಹೊಸ ವರ್ಷಕ್ಕೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಭವನದಿಂದಲೇ ಸಮಸ್ಯೆಗಳು ಆರಂಭವಾ ಗದಂತೆ ಎಲ್ಲರಿಗೂ ಅನುಕೂಲವಾಗುವ ದೃಷ್ಟಿಯಿಂದ ಆಶಾಭವನೆಯೊಂದಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಾರ್ವಜನಿಕರು ಹೊಸ ಜಿಲ್ಲಾಡಳಿತ ಭವನಕ್ಕೆ ತೆರಳಲು ಸಿದ್ದಗೊಳಿಸಬೇಕಾಗಿದೆ. ನಗರದಿಂದ ದೂರದಲ್ಲಿರುವ ಜಿಲ್ಲಾಡಳಿತ ಭವನಕ್ಕೆ ಸಾರ್ವಜನಿಕರ ತೆರಳುವದೊಂದು ಸಾಹಸ ಕೆಲಸವಾಗಿದೆ. ಭವನಕ್ಕೆ ಸಾರಿಗೆ ವ್ಯವಸ್ಥೆ ಮಾಡುವದು, ಅಟೋ ದರ ನಿಗಧಿಗೊಳಿಸುವ ಕೆಲಸವೂ ಪ್ರಾರಂಭವಾಗಿಲ್ಲ. ಕಚೇರಿ ಹೋಗಿ ಬರಲು ನೂರಾರು ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆಗೆ ಜನರು ಗುರಿಯಾಗುವಂತಾಗಿದೆ.

Megha News