ರಾಯಚೂರು. ಅಣ್ಣತಮ್ಮಂದಿರ ಜಮೀನು ವಿವಾದಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ತೊಗರಿ ಬೆಳೆ ಹಾನಿಯಾಗಿದೆ. ಬೆಳೆದಿದ್ದ ಬೆಳೆಯನ್ನ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿ ರುವ ಅಣ್ಣತಮ್ಮಂದಿರೇ ನಾಶಪಡಿಸಿದ್ದ ಘಟನೆ ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ನಡೆದಿದೆ.
8 ವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 6 ಲಕ್ಷ ರೂ ಬೆಳೆ ನಾಶ ಮಾಡಿದ್ದಾರೆ.
ಸುಮಾರು 2 ವರೆ ಲಕ್ಷ ರೂ ಖರ್ಚು ಮಾಡಿ ರೈತ ಶ್ರೀರಾಮುಲು ಬೆಳೆದಿದ್ದ ಬೆಳೆ ನಷ್ಟ ಉಂಟಾಗಿದೆ.
ಸೀತಾರಾಮರಡ್ಡಿ, ವೆಂಕಟರೆಡ್ಡಿ, ಗೋವರ್ಧನ ರೆಡ್ಡಿ ಎಂಬುದರಿಂದ ಬೆಳೆ ನಾಶಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜೀ ಸಂಧಾನ ಮೂಲಕ ಜಮೀನು ವಿವಾದ ಬಗೆಹರಿದಿದ್ದರೂ ಸಹ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.
1 ಎಕರೆಗೆ 10 ಸಾವಿರ ಲೀಸ್ ಕೊಡುವುದಾಗಿ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆದಿದ್ದ ಶ್ರೀರಾಮುಲು ಅವರು ಬೆಳೆನಾಶದ ಹಿನ್ನೆಲೆ ಸಹೋದರರ ವಿರುದ್ದ ಪ್ರಕರಣ ದಾಖಲಿಸಿದ್ದರು.
ಬೆಳೆನಾಶಕ್ಕೆ ಪರಿಹಾರ ಒದಗಿಸಿಕೊಂಡುವಂತೆ
ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Megha News > Crime News > ಅಣ್ಣತಮ್ಮಂದಿರ ಜಮೀನು ವಿವಾದಕ್ಕೆ ಲಕ್ಷಾಂತರ ರೂ. ಬೆಳೆ ನಾಶ, ದೂರು ದಾಖಲು ನಷ್ಟ ಪರಿಹಾರಕ್ಕೆ ರೈತ ಒತ್ತಾಯ
ಅಣ್ಣತಮ್ಮಂದಿರ ಜಮೀನು ವಿವಾದಕ್ಕೆ ಲಕ್ಷಾಂತರ ರೂ. ಬೆಳೆ ನಾಶ, ದೂರು ದಾಖಲು ನಷ್ಟ ಪರಿಹಾರಕ್ಕೆ ರೈತ ಒತ್ತಾಯ
Tayappa - Raichur26/10/2024
posted on
Leave a reply