ರಾಯಚೂರು. ಬೃಹದಾಕಾರದ ಮೊಸಳೆ ಯೊಂದು ಮಾವಿನಕೆರೆಯಲ್ಲಿ ಪ್ರತ್ಯೇಕ್ಷವಾಗಿ ದ್ದರಿಂದ ಸುತ್ತಮುತ್ತಲಿನ ನಿವಾಸಿಗಳು ಭಯ ಭೀತರಾಗಿದ್ದಾರೆ.
ಮಾವಿನ ಕೆರೆಯ ಪಕ್ಕದ ರಸ್ತೆಯಿಂದ ನಂದೀಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಹತ್ತಿರದಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯೇಕ್ಷವಾಗಿದೆ, ಕೆರೆಯಲ್ಲಿ ತಾಡಪಲ್ ಬಿಸಾಡಿದ್ದು ಅದರ ಮೇಲೆ ಮೊಸಳೆ ಮಲಗಿದ ದೃಶ್ಯ ಮೊಬೈಲ್ ಕ್ಯಾಮರಾಗೆ ಸೆರೆಯಾಗಿದೆ.
ಕೆರೆಯಲ್ಲಿ ಮೊಸಳೆ ಕಂಡು ಬಂದಿದ್ದರಿಂದ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ, ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಮಾವಿನಕೆರೆಗೆ ದೈಡಾಯಿಸಿದ್ದಾರೆ, ಕೆರೆಯಲ್ಲಿರುವ ಮೊಸಳೆ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ಪರಿಶೀಲಿಸಿದ್ದಾರೆ, ಮೊಸಳೆ ಪ್ರತ್ಯೇಕವಾಗಿರುವ ಫೋಟೋಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತೋರಿಸಿದ್ದು, ಮೊಸಳೆ ಸೆರೆಗೆ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ.