ರಾಯಚೂರು.ತಾಲ್ಲೂಕಿನ ಬೀಜನಗೇರಾ ಗ್ರಾಮದಲ್ಲಿ ನೂತನ ಶ್ರೀ ಆಂಜನೇಯ್ಯ ದೇವಸ್ಥಾನದ ಉದ್ಘಾಟನೆ ಸಮಾರಂಭದಲ್ಲಿ ಗರುಡಸ್ತಂಭ ಸ್ಥಾಪನೆ ವೇಳೆ ಕಲ್ಲು ಮುರಿದು ಬಿದ್ದಿದ್ದು ಭಾರೀ ಅನಾಹುತ ತಪ್ಪಿದೆ.
ಬೆಳಿಗ್ಗೆ ಶ್ರೀ ಆಂಜನೇಯ್ಯ ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ನಂತರ ಗರುಡಸ್ತಂಭ ಸ್ಥಾಪನೆಗೆ ಮುಂದಾದಾಗ ಕ್ರೇನ್ ಮೂಲಕ ಗರುಡಸ್ತಂಭ ಎತ್ತುವ ವೇಳೆ ಕಲ್ಲು ಮೂರ್ನಾಲ್ಕು ತುಂಡಾಗಿ ಬಿದ್ದಿದೆ. ಈ ವೇಳೆ ಜನರು ದೂರ ನಿಂತಿದ್ದರಿAದ ಭಾರಿ ಅನಾಹುತ ತಪ್ಪಿದೆ.
ಕಿಲ್ಲೆ ಬೃಹನ್ಮಠ ಶ್ರೀಶಾಂತಮಲ್ಲ ಶಿವಾಚಾರ್ಯರು ಹಾಗೂ ಶಾಸಕ ಡಾ.ಎಸ್.ಶಿವರಾಜ ಪಾಟೀಲ್‌ರು ಪೂಜೆ ನೆರವೇರಿಸಿದ ನಂತರ ಗರುಡಸ್ತಂಭವನ್ನು ಕ್ರೇನ್ ಮೂಲಕ ಮೇಲೆತ್ತಿ ಸ್ಥಾಪಿಸುವ ವೇಳೆ ಹಠಾತ್‌ನೆ ಮುರಿದು ಬಿದ್ದಿದ್ದು, ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನಂತರ ಗ್ರಾಮದಲ್ಲಿ ಮೆರವಣಿಗೆ ನಡೆಯಿತು.ಕಾರ್ಯಕ್ರಮದಲ್ಲಿ ಕಿಲ್ಲೆ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು, ಶಾಸಕ ಡಾ.ಎಸ್.ಶಿವರಾಜ ಪಾಟೀಲ್, ಆರ್‌ಡಿಎ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ವೈ.ಗೋಪಾಲರೆಡ್ಡಿ, ಕಾಂಗ್ರೆಸ್ ಮುಖಂಡರಾದ ಕೆ.ಶಾಂತಪ್ಪ, ಡಿ.ಕೆ.ಮುರಳಿ ಯಾದವ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
Megha News > Local News > ಬೀಜನಗೇರಾ: ಮುರಿದು ಬಿದ್ದ ಗರುಡಸ್ತಂಭ- ತಪ್ಪಿದ ಭಾರೀ ಅನಾಹುತ
ಬೀಜನಗೇರಾ: ಮುರಿದು ಬಿದ್ದ ಗರುಡಸ್ತಂಭ- ತಪ್ಪಿದ ಭಾರೀ ಅನಾಹುತ
Tayappa - Raichur25/05/2025
posted on

Leave a reply