ರಾಯಚೂರು. ಬೀದಿ ನಾಯಿಗಳ ಹಾವಳಿ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದೆ, ಕಳೆದ ಒಂದು ತಿಂಗಳ ಹಿಂದೆಯೇ ಕಟ್ಲಟೂರು ಗ್ರಾಮದ ಬಾಲಕಿ ಸರೀತಾ(8) ಹುಚ್ಚು ನಾಯಿ ದಾಳಿಯಿಂದ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಟ್ಲಟೂರು ಗ್ರಾಮದ ಬಾಲಕಿ ಸರೀತಾ(8) ಹುಚ್ಚು ನಾಯಿಗಳ ದಾಳಿಗೆ ಒಳಗಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಮನೆ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಹುಚ್ಚು ನಾಯಿ ದಾಳಿ ನಡೆಸಿದೆ, ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೇ ಬಾಲಕಿ ಸರೀತಾ ಮೃತಪಟ್ಟಿದ್ದಾಳೆ.
ಗ್ರಾಮೀಣ ಭಾಗದಲ್ಲಿಯೂ ಬೀದಿನಾಯಿಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಸಂಚರಿಸುತ್ತಿವೆ.
ಗ್ರಾಮದಲ್ಲಿ ಡಂಗೂರ ಸಾರಲು ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿದೆ, ಜಿಲ್ಲಾ ಪಂಚಾಯತ ಸಿಇಒ ಅವರು ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಆದೇಶ ನೀಡಿ ಬೀದಿ ನಾಯಿಗಳ ಕಾರ್ಯಚರ ಣೆಗೆ ಸೂಚಿಸದಬೇಕಾಗಿದೆ.