ರಾಯಚೂರು- ಲೋಕಸಭಾ ಚುನಾವಣೆಗೆ ಟಿಕೇಟ್ ಕೈ ತಪ್ಪಿದ್ದರಿಂದ ಅಸಮಧಾನಗೊಂಡಿರು ಮಾಜಿ ಸಂಸದ ಬಿ.ವಿ.ನಾಯಕ ಸಮಧಾನಗೊಳಿಸುವ ಪ್ರಯತ್ನ ಬಿಜೆಪಿ ಮುಖಂಡರು ಪ್ರಾರಂಬಿಸಿದ್ದಾರೆ.
ಗುರುವಾರದಂದು ಮಾನವಿಗೆ ಅಗಮಸಿದ ಬಿಜೆಪಿ ಲೋಕಸಭಾ ಚುನಾವಣಾ ಪ್ರಭಾರಿ ದೊಡ್ಡನಗೌಡ ಕುಷ್ಟಗಿ ಹಾಗೂ ಬಿಜೆಪಿ ಬಳ್ಳಾರಿ ವಲಯ ಕಾರ್ಯದರ್ಶಿ ಚಂದ್ರಶೇಖರ ಅಲಿಗೇರಿಯವರು ಅಸಮಧಾನಿತ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರು.ಸಭೆಯಲ್ಲಿ ಪಕ್ಷ ಮುಖಂಡರೇ ಕರೆದು ಚುನಾವಣೆಯಲ್ಲಿ ಸ್ಪರ್ದಿಸುವಂತೆ ಹೇಳಿದ್ದರಿಂದ ಪ್ರಯತ್ನ ಮಾಡಲಾಯಿತು. ಜಿಲ್ಲಾ ಮತ್ತು ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಬಿ.ವಿ.ನಾಯಕರಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದ್ದರು ಏಕಾಎಕಿ ಅಮರೇಶ್ವರ ನಾಯಕರಿಗೆ ಟಿಕೇಟ ಘೋಷಿಸಿದ್ದು ಏಕೆ ಎಂದು ಪ್ರಶ್ನಿಸಿದರು.ಯಾವ ಮಾನದಂಡ ಮೇಲೆ ಟಿಕೇಟ್ ಘೋಷಿಸಿದ್ದರಿ ಎಂದು ಪ್ರಶ್ನಿಸಿದರು. ಕಳೆದ ಐದು ವರ್ಷದಲ್ಲಿ ಕಾರ್ಯಕರ್ತರೊಂದಿಗೆ ಸಂಪರ್ಕ ಇಟ್ಟುಕೊಳ್ಳದ ನಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಯೋಜನೆಗಳು ಜಾರಿಗೊಳಿಸಿಲ್ಲ.ಕಾರ್ಯಕರ್ತರನ್ನು ಕಡೆಗಣಿಸಿರುವ ಹಾಲಿ ಸಂಸದರಿಗೆ ಟಿಕೇಟ್ ನೀಡಬಾರದು ಎಂದು ಅನೇಕ ನಾಯಕರು ಅಭಿಪ್ರಾಯಿಸಿದರು.ಸಭೆಯ ನಂತರ ಮಾತನಾಡಿದ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿಸಲಾಗುತ್ತದೆ.ಯಾವುದೇ ಅವಸರದ ನಿರ್ಧಾರ ಮಾಡದಂತೆ ಮನವಿ ಮಾಡಿದರು. ಸಭೆಯಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮಾಜಿ ಸಂಸದ ಬಿ.ವಿನಾಯಕ, ತಿಮ್ಮಾರೆಡ್ಡಿ ಬೋಗಾವತಿ ಸೇರಿದಂತೆ ಅನೇಕ ಮುಖಂಡರು ಸಭೆಯಲ್ಲಿ ಭಾಗಿಯಾದರು.
ನಿನ್ನೆಯಷ್ಟೆ ಪ್ರತ್ಯೇಕ ಸಭೆ ನಡೆಸಿದ್ದ ಅತೃಪ್ತರು ಪಕ್ಷದ ನಿರ್ಧಾರ ವಿರೋದಿಸಿ ಪ್ರತಿಭಟನೆ ನಡೆಸಿದ್ದರು.
Megha News > Local News > ಬಿ.ವಿ.ನಾಯಕ ಬಂಡಾಯ ಶಮನಕ್ಕೆ ಮುಂದಾದ ನಾಯಕರು: ಕಾರ್ಯಕರ್ತ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ನಾಯಕರಿಗೆ ಮಾಹಿತಿ- ದೊಡ್ಡನಗೌಡ
ಬಿ.ವಿ.ನಾಯಕ ಬಂಡಾಯ ಶಮನಕ್ಕೆ ಮುಂದಾದ ನಾಯಕರು: ಕಾರ್ಯಕರ್ತ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ನಾಯಕರಿಗೆ ಮಾಹಿತಿ- ದೊಡ್ಡನಗೌಡ
Tayappa - Raichur28/03/2024
posted on
Leave a reply