Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsPolitics News

ಸಚೇತಕ ಸಲೀಂ ಅಹ್ಮದ್ ಸಮ್ಮುಖದಲ್ಲಿ ಸ್ಪೋಟಗೊಂಡ ಅಸಮಧಾನ, ಇಟಗಿ ವಿರುದ್ಧ ಮುಖಂಡರ ಅಕ್ರೋಶ, ನಿಷ್ಠಾವಂತರಿಗೆ ಅನ್ಯಾಯ

ಸಚೇತಕ ಸಲೀಂ ಅಹ್ಮದ್ ಸಮ್ಮುಖದಲ್ಲಿ ಸ್ಪೋಟಗೊಂಡ ಅಸಮಧಾನ, ಇಟಗಿ ವಿರುದ್ಧ ಮುಖಂಡರ ಅಕ್ರೋಶ, ನಿಷ್ಠಾವಂತರಿಗೆ ಅನ್ಯಾಯ

ಮಾಹಿತಿ ನೀಡಿದ ಶ್ರೀದೇವಿ ನಾಯಕ, ಪಕ್ಷಕ್ಕೆ ದ್ರೋಹ ಬಗೆದವರಿಗೆ ಮಣೆ

ರಾಯಚೂರು:ದೇವದುರ್ಗ ತಾಲೂಕಿನಲ್ಲಿ ನಿಷ್ಠಾವಂತರಿಗೆ ಅನ್ಯಾಯವಾಗುತ್ತಿದ್ದು,ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿರುವವರಿಗೆ ಮಣೆ ಹಾಕಲಾಗಿದೆ ಎಂದು ನಿಷ್ಠಾವಂತ ಕಾರ್ಯಕರ್ತರ ನಿಯೋಗ ಸಚೇತಕ ಸಲೀಂ ಅಹ್ಮದ್ ಉಪಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಅಕ್ರೋಶ ವ್ಯಕ್ತವಾಗಿದೆ.
ಕ್ಷೇತ್ರದಲ್ಲಿ ಪರಾಜಿತ ಅಭ್ಯರ್ಥಿ ಶ್ರೀದೇವಿ ನಾಯಕ ನೀಡಿದ್ದ ಎಪಿಎಂಸಿಯ ಪದಾಧಿಕಾರಿಗಳ ಪಟ್ಟಿಗೆ ರಾಜ್ಯ ಘಟಕ ಸಮ್ಮತಿ ನೀಡಿ ನೇಮಕಮಾಡಲಾಗಿತ್ತು.ಆದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಟ್ಟಿಯನ್ನು ಬದಲಾವಣೆ ಮಾಡಿ,ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬಹಿರಂಗವಾಗಿ ಮತ ಹಾಕಿಸಿರುವ ಆದನಗೌಡ ಪಾಟೀಲ್‌ರಿಗೆ ಅಧ್ಯಕ್ಷ ಪದವಿ ನೀಡಿದ್ದಾರೆ.ಈಗಾಗಲೇ ಇವರೇ ಕಾಂಗ್ರೆಸ್ ಅಧ್ಯಕ್ಷರಿದ್ದಾರೆ.ಹಾಲಿ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಕೂಡ ಬಹಿರಂಗವಾಗಿಯೇ ಜೆಡಿಎಸ್ ಪರ ಮತ ಹಾಕಿಸಿದ್ದು,ಪಕ್ಷ ವಿರೋಧಿಗಳಿಗೆ ಮಣೆ ಹಾಕಲಾಗುತ್ತದೆ ಎಂದು ಕಾರ್ಯಕರ್ತರು,ಮುಖಂಡರು ಅಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿದೆ.
ಕೆಲ ಮುಖಂಡರು ಸಭೆ ಪ್ರಾರಂಭವಾಗುವ ಮೊದಲೇ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್‌ರ ಮೇಲೆ ಮುಗಿಬಿದ್ದು,ಹಿಗ್ಗಾ ಮುಗ್ಗಾ ಜಗಳವಾಗಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರದಾಡುತ್ತಿದೆ.
ಚುನಾವಣೆ ಕಳೆದು ವರ್ಷ ಕಳೆದರೂ ತಾಲೂಕಿನಲ್ಲಿ ಒಂದೂ ಸಭೆ ನಡೆಸಿಲ್ಲ.ನಿಷ್ಠಾವಂತರನ್ನು ಸಂಪೂರ್ಣ ಕಡೆಗಣ ಸಲಾಗಿದೆ.ತಾ.ಪಂ,ಜಿ.ಪಂ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಬೇಕಾಗಿದೆ.ಕಡಿಮೆ ಮತಗಳನ್ನು ಪಡೆಯಲಾಗಿದೆ ಎಂದೇ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ.ಅಭ್ಯರ್ಥಿಗೆ ಮತಗಳು ಕಡಿಮೆಯಾಗಲು ಯಾರು?ಕಾರಣ ಎಂಬುದನ್ನುಆತ್ಮಾವಲೋಕ ಮಾಡಿಕೊಳ್ಳಬೇಕಾಗಿದೆ.
ಕಳೆದ ೩೦-೪೦ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ.ಆದರೆ ಇಟಗಿ ಆಯಿಂಡ್ ಗ್ಯಾಂಗ್‌ನಿಂದ ಪಕ್ಷ ತಾಲೂಕಿನಲ್ಲಿ ಹೀನಾಯ ಪರಿಸ್ಥಿತಿ ನಿರ್ಮಾಣಗೊಂಡಿದೆ.ಹೀಗಾಗಿ ಪಕ್ಷ ಮತ್ತು ಕಾರ್ಯಕರ್ತರ ಪರಿಸ್ತಿತಿಯನ್ನು ತಮ್ಮ ಗಮನಕ್ಕೆ ತಂದಿದ್ದು,ವಾತಾವರಣ ತಿಳಿಗೊಳಿಸಿ ಪಕ್ಷ ಗಟ್ಟಿಗೊಳಿಸಲು ಕ್ರಮಕೈಗೊಳ್ಳಬೇಕೆಂದು ಮುಖಂಡರು ಒತ್ತಾಯಿಸಿದರು.
ಅಪಪ್ರಚಾರ ಕಾರಣ:ವಿಧಾನ ಸಭಾ ಚುನಾವಣೆಯಲ್ಲಿ ದುರುದ್ದೇಶದಿಂದ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು.ಮಾನಸಿಕವಾಗಿ ಕುಗ್ಗುವಂತೆ ಪಕ್ಷದವರೇ ನಡೆದುಕೊಂಡರು ಎಂದು ಪರಾಜಿತ ಅಭ್ಯರ್ಥಿ ಶ್ರೀದೇವಿ ನಾಯಕ ಸಭೆಗೆ ಮಾಹಿತಿ ನೀಡಿದರು.
೪ಸಲ ಎಂಪಿ,ಒಮ್ಮೆ ಎಂಎಲ್‌ಎ ಆಗಿ ಜನಸೇವೆ ಮಾಡಿರುವ ಸರಳ,ಸಜ್ಜನಿಕೆಗೆ ಹೆಸರಾಗಿದ್ದ ಎ.ವೆಂಕಟೇಶನಾಯಕರ ಮೊಮ್ಮಗಳು ನಾನು.ನಮ್ಮ ಉಸಿರು ಕಾಂಗ್ರೇಸ್.ಆದರೆ ನಾವು ಸತ್ತರೂ ದ್ರೋಹ ಬಗೆಯವರಲ್ಲ.ಹಣಕಾಸಿನ ತೊಂದರೆ ಹಾಗೂ ಫೇಸ್ ಬುಕ್,ವ್ಯಾಟ್ಸ್ಪ್ ಗಳಲ್ಲಿ ಕೆ.ಶಿವನಗೌಡ ನಾಯಕ ಬಂಧುವಾಗಿರುವದರಿಂದ ಹೊಂದಾಣ ಕೆ ಮಾಡಿಕೊಂಡಿದ್ದಾರೆ ಎಂದು ಪಕ್ಷದ ಕುತಂತ್ರಿಗಳಿಂದ ನನಗೆ ಸೋಲಾಗಿದೆ.
ಸೋಲಿನ ಹತಾಶೆಯಿಂದ ಮನೆಯಲ್ಲಿ ಕೂಡದೇ,ಪಕ್ಷದ ಸಂಘಟನೆಗೆ,ನಿಷ್ಠಾವಂತರಿಗೆ ನ್ಯಾಯ ಕೊಡಿಸುವ ನಿಮಿತ್ಯ ಸಕ್ರೀಯವಾಗಿ ಚಟುವಟಿಕೆಯಲ್ಲಿದ್ದೇನೆ.ಆದರೆ ಇತ್ತೀಚಿನ ಬೆಳವಣ ಗೆಗಳು ಬೇಸರ ಮೂಡಿಸಿದೆ ಎಂದು ಭಾವನಾತ್ಮಕವಾಗಿ ಸಭೆಯಲ್ಲಿ ಶ್ರೀದೇವಿ ನಾಯಕ ಸ್ಪಷ್ಟತೆ ನೀಡಿದರು.
ರಾಜ್ಯ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ಸಚೇತಕ ಸಲೀಂ ಅಹ್ಮದ್ ಸಮಾಧಾನ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
ಈ ಸಂದರ್ಭದಲ್ಲಿ ಮುಖಂಡರಾದ ಗಂಗಪ್ಪಯ್ಯ ಪೂಜಾರಿ ಮಾನಸಗಲ್,ಶರಣಪ್ಪ ಹಿರೇರಾಯಕುಂಪಿ,ಉಸ್ಮಾನಸಾಬ್ ಖಾನಾಪೂರ,ಬೀಮರೆಡ್ಡಿ ನಾಯಕ ಮಲದಕಲ್,ಬಸಲಿಂಗಪ್ಪ,ತಿಮ್ಮಣ್ಣ ಎನ್.ಗಣೇಕಲ್,ಸಾಬಣ್ಣ ಗಾಣದಾಳ ಹಾಗೂ ಇತರರು ಇದ್ದರು.

Megha News