ರಾಯಚೂರು. ವಸತಿ ನಿಲಯದ ಕೊಠಡಿ ಮೇಲ್ಚಾವಣಿ ಪ್ಲಾಸ್ಟಿಂಗ್ ಲೇಯರ್ ಕುಸಿದು ಬಿದ್ದು ಮೂರು ಜನ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಲೂಕಿನ ಉಡಮಗಲ್ ಖಾನಾಪೂರ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡವರು ಗುರುವೇಶ ಜುಲಮಗೇರಾ (14) 8ನೇ ತರಗತಿ ವಿದ್ಯಾರ್ಥಿ, ಕಾರ್ತಿಕ ವಡ್ಲೂರು (14) 8ನೇ ತರಗತಿ ವಿದ್ಯಾರ್ಥಿ, ಹಾಗೂ ಕಿರಣ್ ವಡ್ಲೂರು (14) 8ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿ ಕಾರ್ತಿಕನಿಗೆ ಸಣ್ಣಪುಟ್ಟ ಗಾಯಗಳಾ ಗಿದ್ದು ಚಿಕಿತ್ಸೆ ನೀಡಿ ಕಳುಹಿಸಲಾಗಿದೆ, ಇನ್ನಿಬ್ಬರು ವಿದ್ಯಾರ್ಥಿಗಳಾದ ಗುರುವೇಶ ಮತ್ತು ಕಿರಣ್ ಇವರ ತಲೆಗೆ ಪೆಟ್ಟಾಗಿದ್ದು ಚಿಕಿತ್ಸೆ ನೀಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆ ಹಿನ್ನೆಲೆ:-
ಉಡಮಗಲ್ ಖಾನಾಪೂರ ಗ್ರಾಮದಲ್ಲಿರುವ
ಬಿಸಿಎಂ ಪ್ರಿಮೆಟ್ರಿಕ್ ಬಾಲಕರ ವಸತಿನಿಯದಲ್ಲಿ ನಿನ್ನೆ ಸಂಜೆ 6 ಗಂಟೆಗೆ 16 ಜನ ವಿದ್ಯಾರ್ಥಿಗಳು ಇರುವ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಕುಳಿತಿರುವಾಗಿ ಕೊಠಡಿಯ ಮೇಲ್ಚಾವಣಿಯ ಪ್ಲಾಸ್ಟರ್ ಕಳಿಚಿ ಮೂರು ಜನ ವಿದ್ಯಾರ್ಥಿಗಳ ಮೇಲೆ ಬಿದ್ದು, ಗಾಯಗೊಂಡಿದ್ದರು, ಚಿಕಿತ್ಸೆಗಾಯ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂರು ಜನ ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯವಾಗಿದ್ದು ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.
ಮತ್ತಿಬ್ಬರ ವಿದ್ಯಾರ್ಥಿಗಳ ತಲೆಗೆ ಪೆಟ್ಟಾಗಿದ್ದು ಚಿಕಿತ್ಸೆ ನೀಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಸ್ಥಳಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.