ರಾಯಚೂರು,ಡಿ೫- ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಗಿಮಿಕಿ ಮಾಡುತ್ತಿರುವ ಬ್ರಷ್ಡ ಕಾಂಗ್ರೆಸ್ ಸರಕಾರ ರೈತರ ಭೂಮಿ ಪಡೆಯಲು ವಕ್ಫ ಹೆಸರಿನಲ್ಲಿ ಕಸಿಯಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು. ಲಿಂಗಸೂರುಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಜನರು ನೀಡಿದ ಅಧಿಕಾರವನ್ನು ಕಲ್ಯಾಣ ಕ್ಕಾಗಿ ಬಳಸದೇ ಜನ ಕಲ್ಯಾಣ ಸಮಾವೇಶ ನಡೆಸುತ್ತಿರುವದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು. ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲ ಅಭಿವೃದ್ದಿ ಕೆಲಸಗಳು ನಿಂತು ಹೋಗಿವೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರುಗಳೇ ಹೇಳುತ್ತಿದ್ದಾರೆ ಅಭಿವೃದ್ದಿ ಕೆಲಸ ಇಲ್ಲದೆ ಗುದ್ದಲಿ ಮೂಲೆ ಸೇರಿಸಿದ ದರಿದ್ರ ಸರಕಾರವಿದು ಎಂದು ಲೇವಡಿ ಮಾಡಿದರು. ಮುಡಾ ಪ್ರಕರಣದಲ್ಲಿ ೭೦೦ ಕೋಟಿ ಅಕ್ರಮ ನಿವೇಶನದ ಅಕ್ರಮವನಡೆಸಿದೆ ಎಂದು ತನಿಖಾ ಸಂಸ್ಥೆಗಳು ಹೇಳುತ್ತಿದ್ದರೆ, ಅಕ್ರಮ ನಡೆದಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅವರ ಪತ್ನಿಯ ಹೆಸರಿನ ಲ್ಲಿದ್ದ ೧೪ ನಿವೇಶನ ರಾತ್ರೋರಾತ್ರಿ ಹಿಂದಿರುಗಿಸಿದ್ದಾರೆ. ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ನಾಯಕರು ಗಿಮಿಕ್‌ಮಾಡಿದ್ದಾರೆ. ಈಗ ರಾಜ್ತದ ರೈತರ ಭೂಮಿ ಕಸಿಯಲು ಹೊರಟಿದ್ದಾರೆ. ಜನರು ತಕ್ಕ ಉತ್ತರ ನೀಡಬೇಕೆಂದರು ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ, ಜನಾರ್ಧನರೆಡ್ಡಿ, ಕೆ. ಶಿವನಗೌಡ ನಾಯಕ, ಶಾಸಕ ಮಾನಪ್ಪ ವಜ್ಜಲ್, ಬಿಜೆಪಿ ಜಿಲ್ಲಾದ್ಯಕ್ಷ ಡಾ.ಶಿವರಾಜ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ,ಕಾರ್ಯಕರ್ತರ ಬಾಗವಹಿಸಿದ್ದರು.
Megha News > State News > ರೈತರ ಭೂಮಿ ಕಸಿಯಲು ಹೊರಟ ದರಿದ್ರ ಕಾಂಗ್ರೆಸ್ ಸರಕಾರ: ಜನರ ಕಲ್ಯಾಣ ಮರೆತು ಸಮಾವೇಶ ಮಾಡುತ್ತಿದೆ- ವಿಜಯೇಂದ್ರ ಲೇವಡಿ