ರಾಯಚೂರು. ನಗರಸಭೆಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ಪಾಸ್ಟಿಕ್ ಮಾರಾಟ ಮಾಡುವ ಅಂಗಡಿ, ಮಳಿಗೆಗಳು, ಹೋಟೆಲ್ ಹಾಗೂ ಮಾಲ್‌ಗಳ ಮೇಲೆ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊ ಳ್ಳುತ್ತಿದೆ, ಆದರೆ ಪ್ಲಾಸ್ಟಿಕ್ ತಯಾರಿಕೆ ಮೇಲೆ ಕಡಿ ವಾಣ ಹಾಕುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಇದರಿಂ ದ ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ನಗರದಲ್ಲಿ ಎಲ್ಲಾ ಅಂಗಡಿ, ಮಳಿಗೆ, ಹೋಟೆಲ್, ಮಾಲ್‌ಗಳ ಮೇಲೆ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಡಿದೆ, ಈ ಹಿಂದೆಯೂ ಸಹ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡದಂತೆ ದಾಳಿ ನಡೆಸಿ ವಶಪಡಿಸಿಕೊಂಡಿತ್ತು, ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವುದಾಗಿ ಹೇಳಿದೆ, ಒಂದು ಕಡೆ ಪ್ಲಾಸ್ಟಿಕ್ ತಯಾರಿಕೆಯನ್ನು ಬಂದ್ ಮಾಡದೇ ಮಾರಾಟದ ಮೇಲೆ ಮಾತ್ರ ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಿದೆ, ಇದರಿಂದ, ನಿಷೇಧಿತ ಪ್ಲಾಸ್ಟಿಕ್ ತಯಾರಿಕೆ ಮೇಲೆ ಕ್ರಮ ವಹಿಸುವಲ್ಲಿ ಹಿಂದೇಟು ಹಾಕಿದ್ದು, ಮಾರಾಟ ನಿಷೇಧ ಮಾಡಿದ್ದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ ಬ್ಯಾನ್ ಆಗಿದ್ದರೂ ಸಹ
ಬ್ಯಾನ್ ಕೇವಲ ಹೆಸರಿಗೆ ಮಾತ್ರ ಎನ್ನುವಂತೆ ಕಾಣುತ್ತಿದೆ. ನಗರದಲ್ಲಿ ಯಾವುದೇ ಅಧಿಕಾರಿಗಳ ಭಯವಿಲ್ಲದೇ ಫ್ಲಾಸ್ಟಿಕ್ ತಯಾರಿಸಿ ಮಾರಾಟಕ್ಕೆ ನೀಡುತ್ತಿದೆ, ಅಧಿಕಾರಿಗಳು ಮಾತ್ರ ಏನೂ ಗೊತ್ತಿ ಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ಗಳನ್ನ ಬಳಕೆ ಮಾಡಿದರೆ ದಂಡ ಹಾಕುವುದಾಗಿ ಅಧಿಕಾರಿಗಳು ಹೇಳಿದ್ದು, ಇನ್ನು ಸಣ್ಣ-ಪುಟ್ಟ ಅಂಗಡಿಗಳ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆ ಮಾಡಿದರೆ ಅಧಿಕಾರಿಗಳು ರಾಜಾರೋಷವಾಗಿ ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಿದೆ, ಆದರೆ ಕಾರ್ಖಾನೆಗಳಲ್ಲಿ ಪ್ಲಾಸ್ಟಿಕ್ ತಯಾರಾಗುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪ್ಲಾಸ್ಟಿಕ್ ತಯಾರಿಕೆಗೆ ಅನುಮತಿ ಪಡೆದು ತಯಾರಿಸಬೇಕು, ಆದರೆ, ಯಾವುದೇ ಅನುಮತಿ ಪಡೆಯದೇ ತಯಾರಿಕೆ ಮಾಡಲಾಗುತ್ತಿದೆ.
ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಎನ್ನುವ ನಗರಸಭೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸದೇ ಇರುವುದರಿಂದ ಪ್ಲಾಸ್ಟಿಕ್ ತಯಾರಿಕೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ನಿಷೇಧ ಕುರಿತು ಮಾರಾಟ ಎಷ್ಟು ಅಪರಾಧವೋ ತಯಾರಿಕೆಗೆ ಮಾಡುವುದು ಅಷ್ಟೇ ಅಪರಾಧವಾಗಿದೆ, ಕೂಡಲೇ ಕಾರ್ಖಾನೆಗಳ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿತ ಪ್ಲಾಸ್ಟಿಕ್ ತಯಾರಿಕೆಗೆ ಕಟ್ಟು ನಿಟ್ಟಿನ ಕ್ರಮ ವಗಿಸಬೇಕಾಗಿದೆ.