ರಾಯಚೂರು. ಕುಡಿಯುವ ನೀರಿನ ಅಭಾವದಿಂ ದಾಗಿ ನಗರಕ್ಕೆ ಒಂದು ದಿನ ಬಿಟ್ಟು ಒಂದು ಒಂದು ನೀರು ಸರಬರಾಜು ಮಾಡುತ್ತಿದ್ದು ಇದರ ಬದ ಲಾಗಿ 3 ದಿನಕ್ಕೊಂದು ದಿನ ಸರಬರಾಜು ಮಾಡ ಲಾಗುತಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಪೌರಾಯಕ್ತರು ತಿಳಿಸಿದ್ದಾರೆ.
ತುಂಗಭದ್ರಾ ಮತ್ತು ಕೃಷ್ಣ ನದಿ ಯಲ್ಲಿ ಮಳೆಯ ಅಭಾವದಿಂದ ನೀರಿನ ಹರಿವು ಕೊರತೆ ಉಂಟಾ ಗಿ ರುವುದರಿಂದ ನಗರಕ್ಕೆ ಸರಬರಾಜು ಮಾಡುವ ರಾಂಪೂರ ಶುದ್ದೀಕರಣ ಘಟಕ ಹಾಗೂ ದೇವ ಸೂಗುರು ಜಾಕವೇಲ್ ಪಂಪ್ ಹೌಸ್ ನಲ್ಲಿ ಕಡಿಮೆ ಪ್ರಮಾಣದಲ್ಲಿ ರಾಂಪೂರ ಹಾಗೂ ಕೃಷ್ಣನದಿಯ ಕುಡಿಯುವ ನೀರಿನ ಸರಬರಾಜು ಘಟಕದ ಅವಲಂಭಿತ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ 3 ದಿನಕ್ಕೊಂದು ಬಾರಿ ನೀರು ಸರಬರಾಜು ಮಾಡುತ್ತಿದ್ದು, ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಕೆ ಮಾಡ ಬೇಕು, ಮುಂಜಾಗ್ರತಾ ಕ್ರಮವಾಗಿ ನೀರನ್ನು ಸೋಸಿ ಕಾಯಿಸಿ ಕುಡಿಯಬೇಕು ಎಂದು ತಿಳಿಸಿದ್ದಾರೆ.