ರಾಯಚೂರು. ಪೊಲೀಸರ ವೇಷದಲ್ಲಿ ಬಂದ ದರೋಡೆ ಕೋರರು ಕಳ್ಳತನದ ಬಗ್ಗೆ ಜಾಗೃತಿ ಮೂಡಿಸುವಂತೆ ನಟಿಸಿ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ನಗರ ಹೊರವಲಯದ ನಲ್ಲಗುಂಡಾ ಕ್ರಾಸ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ನಗರದ ಮಡ್ಡಿಪೇಟೆ ನಿವಾಸಿಗಳಾದ ವೈ.ಮಲ್ಲೇಶ ಹಾಗೂ ಸರೋಜಮ್ಮ ಯರಗೇರಾ ಬಡೇಸಾಬ್ ಉರುಸಿಗೆ ಹೋಗಿ ವಾಪಸಾಗುತ್ತಿದ್ದ ವೇಳೆ ನಲ್ಲಗುಂಡಾ ಕ್ರಾಸ್ ಬಳಿ ಬೆಳಿಗ್ಗೆ 9.30ರ ಸುಮಾ ರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಪೊಲೀಸ್ ವೇಷದಲ್ಲಿ ಬೈಕ್ ಮೇಲೆ ಬಂದು ಅವರನ್ನು ನಿಲ್ಲಿಸಿ ರಾತ್ರಿ ಈ ಪ್ರದೇಶದಲ್ಲಿ ಕಳ್ಳತನವಾಗಿದೆ. ಮೈಮೇಲೆ ಈ ರೀತಿಯಾಗಿ ಒಡವೆಗಳನ್ನು ಹಾಕಿಕೊಳ್ಳಬೇಡಿ. ಎಂದು ಜಾಗೃತಿ ಮೂಡಸುವಂತೆ ನಟಿಸಿ ಚಿನ್ನದ ತಾಳಿ ಸರವನ್ನು ಕಾಗದದಲ್ಲಿ ಕಟ್ಟಿಕೊಡುತ್ತೇವೆ ಕೊಡಿ ಎಂದು ಪಡೆದುಕೊಂಡು ನಂತರ ಸರವನ್ನು ತಮ್ಮಲ್ಲಿಯೇ ಇರಿಸಿ ಕಲ್ಲಿನ ಹರಳುಗಳನ್ನು ಕಾಗದಲ್ಲಿ ಕಟ್ಟಿಕೊಟ್ಟು ಪರಾರಿಯಾಗಿದ್ದಾರೆ.
ದುಷ್ಕೃತ್ಯದ ಧೋರಣೆ ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಸ್ಥಳೀಯರು ಘಟನೆ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ಸ್ಪಂಧನೆ ಸಿಕ್ಕಿಲ್ಲ ಎಂದು ಸರ ಕಳೆದುಕೊಂಡ ಆರೋಪಿಸಿದ್ದಾರೆ.
ಈ ಕುರಿತು ಯರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.