ರಾಯಚೂರು. ಮೂರರಿಂದ ನಾಲ್ಕು ರಸ್ತೆಗಳು ಸೇರಿವ ರಸ್ತೆಯಲ್ಲಿ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನು ಕೂಲ ಮಾಡಿಕೊಡಲಾಗಿದೆ, ಆದರೆ ವೃತ್ತದಲ್ಲಿ ಸಿಗ್ನಲ್ ಗಳನ್ನು ಅಳವಡಿಸಿದರೂ ವಾಹನ ಸವಾರರು ಪಾಲನೆ ಮಾಡುತ್ತಿಲ್ಲ, ಸ್ಥಳದಲ್ಲಿ ಸಂಚಾರಿ ಪೊಲೀಸರು ಇದ್ದರೂ ಈ ಬಗ್ಗೆ ಕ್ರಮ ವಹಿಸುವಲ್ಲಿ ವಿಫಲರಾಗಿದ್ದಾರೆ, ಟ್ರಾಫಿಕ್ ಸಿಗ್ನಲ್ ಇದ್ದೂ ಇಲ್ಲದಂತಾಗಿದೆ.
ನಗರದ ಬಸವೇಶ್ವರ ವೃತ್ತ, ಮತ್ತು ಗಂಜ್ ವೃತ್ತ ದಲ್ಲಿ ಸಿಗ್ನಲ್ ಗಳನ್ನು ಅಳವಡಿಸಲಾಗಿದೆ, ಒಂದರಿಂದ ಎರಡು ನಿಮಿಷಗಳ ಸಿಗ್ನಲ್ ಇದ್ದು, ಸಿಗ್ನಲ್ ನ ಸಮಯ ಇದ್ದರೂ ವಾಹನ ಸವಾರರು ನಿಯಮ ಪಾಲನೆ ಮಾಡದೇ ತೆರಳುತ್ತಿದ್ದಾರೆ, ಇದರಿಂದ ಸಾಕಷ್ಟು ಅಪಘಾತಗಳು ಸಿಗ್ನಲ್ ಗಳಲ್ಲಿ ಸಂಬವಿಸುತ್ತವೆ, ಟ್ರಾಫಿಕ್ ಸಿಗ್ನಲ್ ಬಳಿ ಸಂಚಾರಿ ಪೋಲಿಸರು ಸ್ಥಳದಲ್ಲಿ ಇದ್ದೂ ಇಲ್ಲ ದಂತಾಗಿದೆ, ಯಾವುದೋ ಒಂದು ಮೂಲೆಯಲ್ಲಿ ಬೈಕ್ ಮೇಲೆ ಇಲ್ಲ ಟ್ರಾಫಿಕ್ ಸಿಗ್ನಲ್ ಹತ್ತಿರ ಮೊಬೈಲ್ ನೋಡುತ್ತಾ ಕುಳಿತಿರುವುದು ಗಮ ನಕ್ಕೆ ಬಂದಿದೆ.
ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಸಂಚಾರಿ ನಿಯಮಗಳನ್ನು ಮಾಡಲಾಗಿದೆ,
ಟ್ರಾಫಿಕ್ ಸಿಗ್ನಲ್ ಗಳನ್ನು ಪಾಲನೆ ಮಾಡುವುದು ಮೋಟಾರು ವಾಹನವನ್ನು ಚಾಲನೆ ಮಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ ಟ್ರಾಫಿಕ್ ಸಿಗ್ನಲ್ ಗಳನ್ನು ಉಲ್ಲಂಘಿಸಿದಲ್ಲಿ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ, ರಸ್ತೆಯೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಕೆಂಪು ದೀಪ ಇದ್ದರೂ ಸಹ ವಾಹನವನ್ನು ಚಲಾಯಿಸಲು ಪ್ರಾರಂಭಿಸಿದಲ್ಲಿ, ನಿಮ್ಮ ವಾಹನವನ್ನು ನಿಲ್ಲಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಆದರೆ ಟ್ರಾಫಿಕ್ ಪೋಲಿಸರು ಸಿಗ್ನಲ್ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುತ್ತಿಲ್ಲ, ನೋಡಿ ನೋಡದಂತಿದ್ದಾರೆ
ಆದರೆ ಬೇರೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡಿ ದಂಡ ಹಾಕುತ್ತಿರುವುದು ಸರಿಯಲ್ಲ ಎಂದು ವಾಹನ ಸವಾರರು ಪ್ರಶ್ನೆಯಾಗಿದೆ.
ಈಗಲಾದರೂ ಈ ಬಗ್ಗೆ ಎಚ್ಚೆತ್ತುಕೊಂಡ ಟ್ರಾಫಿಕ್ ಸಿಗ್ನಲ್ ಗಳನ್ನು ವಾಹನ ಸವಾರರು ಉಲ್ಲಂಘನೆ ಮಾಡಿದ್ದಲ್ಲಿ ದಂಡ ವಿಧಿಸುವುದರ ಜೊತೆಗೆ ಕಡ್ಡಾಯವಾಗಿ ನಿಯಮ ಪಾಲನೆ ಮಾಡುವುದರ ಜೊತೆಗೆ ಅಪಘಾತಗಳನ್ನು ತಪ್ಪಿಸಬೇಕಾಗಿದೆ.