Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ರಂಗಭೂಮಿ ಕಲಾವಿದ ರಾಯಪ್ಪ ಹಸ್ಮಕಲ್‌ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನ

ರಂಗಭೂಮಿ ಕಲಾವಿದ ರಾಯಪ್ಪ ಹಸ್ಮಕಲ್‌ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನ

ರಾಯಚೂರು.ರಂಗಭೂಮಿ ಕಲಾವಿದ ರಾಯಪ್ಪ ಹಸ್ಮಕಲ್‌ ಅವರು ಕರ್ನಾಟಕ ನಾಟಕ ಅಕಾಡೆ ಮಿಯ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಿಲ್ಲೆಯ ಮಾನವಿ ತಾಲೂಕಿನ ಕವಿತಾಳ ಸಮೀಪ ಇರಕಲ್‌ ಗ್ರಾಮದ ರಂಗಭೂಮಿ ಕಲಾವಿದ ರಾಯಪ್ಪ ಹಸ್ಮಕಲ್‌ ಅವರನ್ನು ಆಯ್ಕೆ ಮಾಡಲಾಗಿದೆ.
ರಂಗಭೂಮಿ ಕಲಾವಿದ ರಾಯಪ್ಪ ಹಸ್ಮಕಲ್‌ ಅವರು ಕಳೆದ ನಾಲ್ಕು ದಶಕಗಳಿಂದ ರಂಗಭೂ ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗಭೂಮಿ ಕಲಾವಿದ ರಾಮರಾವ್‌ ದೇಸಾಯಿ ಅವರ ಪ್ರೇರಣೆಯಿಂದ ಪಿಯುಸಿ ಕಲಿಯುತ್ತಿರುವಾಗಲೇ ರಂಗಭೂಮಿಗೆ ಪ್ರವೇಶ ಮಾಡಿದರು.
1974ರಲ್ಲಿ ಹಾಲಾಪುರದ ರಾಮರಾವ್‌ ದೇಸಾ ಯಿ ಅವರ ನಾಟಕ ಕಂಪನಿ ಹುಬ್ಬಳ್ಳಿಯಲ್ಲಿ ಹಾಕಿದ ರಂಗಸಜ್ಜಿಕೆಯಲ್ಲಿ ಗೌಡ್ರಗದ್ಲ ಸಾಮಾಜಿಕ ನಾಟಕದಲ್ಲಿ ಮಲ್ಲೇಶಿ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿ ಪ್ರವೇಶಿಸಿದ ಅವರು ಧುತ್ತರಗಿ ನಾಟಕ ಕಂಪನಿಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಚಿತ್ತರಗಿ ನಾಟಕ ಕಂಪನಿಯಲ್ಲಿ ಇಪ್ಪತ್ತು ವರ್ಷ ಮತ್ತು ಪ್ರೇಮಾ ಗುಳೇದಗುಡ್ಡ ಅವರ ಆಶಾಪುರ ನಾಟಕ ಕಂಪನಿಯಲ್ಲಿ ಹತ್ತು ವರ್ಷ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಎಚ್ಚರ ತಂಗಿ ಎಚ್ಚರ, ತಾಯಿ ಕರುಳು, ಎಂತ ಮೋಜಿನ ಕುದುರೆ, ಕಿವುಡ ಮಾಡಿದ ಕಿತಾಪತಿ, ಆಯ ನೋಡಿ ಪಾಯ ಹಾಕು ತೂಕದ ಹೆಣ್ಣು ಸೇರಿದಂತೆ ಅನೇಕ ನಾಟಕಗಳಲ್ಲಿ ಹಾಸ್ಯ ಕಲಾವಿದರಾಗಿ ಅವರು ಪ್ರದರ್ಶಿಸಿದ ಕಲೆಯನ್ನು ಜನರು ಈಗಲೂ ಮೆಲುಕು ಹಾಕುತ್ತಾರೆ.
ಸದ್ಯ ಅವರಿಗೆ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸಿಕ್ಕಿರುವುದು ಗ್ರಾಮಸ್ಥರಲ್ಲಿ ಸಂತಸ ಉಂಟು ಮಾಡಿದೆ.

Megha News