ಮಸ್ಕಿ: ಒಂದೇ ಬಡಾವಣೆಯಲ್ಲಿ ಎರಡು ಮನೆಯಲ್ಲಿ ಕಳ್ಳರು ಕಳ್ಳತನ ಮಾಡಿರುವ ಘಟನೆ ಪಟ್ಟಣದ ಬಳಗನೂರು ರಸ್ತೆಯ ಪಾರ್ವತಿ ನಗರದಲ್ಲಿ ನಡೆದಿದೆ.
ಪಟ್ಟಣದ ನಿವಾಸಿ ಮಲ್ಲಯ್ಯ ನಾಗಡದಿನ್ನಿ ಮನೆಯಲ್ಲಿ ಬಾಗಿಲು ಕೀಲಿ ಒಡೆದು 30 ಸಾವಿರ ನಗದನ್ನು ಕಳ್ಳತನ ಮಾಡಿದ್ದಾರೆ. ಹಾಗೂ ಅದೇ ಬಡಾವಣೆಯ ಬಸವರಾಜ ಕೋರಿ ಎನ್ನುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ, ಬಾಗಿಲಿಗೆ ಇಂಟರ್ ಲಾಕ್ ಸಿಸ್ಟಮ್ ಅಳವಡಿಸಿದ್ದರಿಂದ ಬೀಗ ಮುರಿಯದೇ ಇರುವುದರಿಂದ ಕಳ್ಳರು ವಾಪಾಸ್ಸಾಗಿದ್ದಾರೆ, ಒಂದೇ ಬಡಾವಣೆಯಲ್ಲಿ ಕಳ್ಳತನ ಕೈ ಚಳಕ ತೋರಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ನಿವಾಸಿಗಳು ರಾತ್ರಿ ಸಮಯ ಮನೆಯ ಮೇಲೆ ಬಲಗಿದ್ದರಿಂದ ಕಳ್ಳರಿಗೆ ಕಳ್ಳತನ ಮಾಡಲು ಸುಲಭವಾಗಿದೆ. ಈ ಘಟನೆಯಿಂದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಕಳ್ಳತನ ಕುರಿತು ಸ್ಥಳೀಯ ನಿವಾಸಿಗಳು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.