Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics NewsState News

ಬಿಜೆಪಿ ರಾಜಕೀಯಕ್ಕೆ ವಿರೋಧವಿದೆ ಹೊರತು ರಾಮಮಂದಿರ ಉದ್ಘಾಟನೆಗೆ ನಮ್ಮ ವಿರೋಧವಿಲ್ಲ- ಸಿದ್ದರಾಮಯ್ಯ ಲೋಕಸಭಾ ಕ್ಷೇತ್ರಗಳ ಪ್ರಮುಖ ನಾಯಕರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಅಂತಿಮ

ಬಿಜೆಪಿ ರಾಜಕೀಯಕ್ಕೆ ವಿರೋಧವಿದೆ ಹೊರತು ರಾಮಮಂದಿರ ಉದ್ಘಾಟನೆಗೆ ನಮ್ಮ ವಿರೋಧವಿಲ್ಲ- ಸಿದ್ದರಾಮಯ್ಯ ಲೋಕಸಭಾ ಕ್ಷೇತ್ರಗಳ ಪ್ರಮುಖ ನಾಯಕರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಅಂತಿಮ

ದೇವದುರ್ಗ.ಅಯೋಧ್ಯೆಯಲ್ಲಿ ರಾಮಮಂದಿರ, ರಾಮ ಪ್ರಾಣ ಪ್ರತಿಷ್ಠಾಪನೆಗೆ ನಮ್ಮ ವಿರೋಧವಿಲ್ಲ.ಆದರೆ ಬಿಜೆಪಿಯವರ ರಾಜಕೀಯಕ್ಕೆ ವಿರೋಧವಿದೆ. ನಾನೆಂದು ಅಯೋಧ್ಯೆಗೆ ಹೋಗುವದಾಗಿ, ಹೋಗವದಿಲ್ಲ ಎಂದು ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ತಿಂತಿಣಿ ಬ್ರಿಜ್‌ನಲ್ಲಿ ಆಯೋಜಿ ಸಲಾಗಿದ್ದ ಹಾಲುಮತ ಸಾಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸದ ಸಂದರ್ಬದಲ್ಲಿ ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದರು.
ಜ.೨೨ ರಂದು ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಉದ್ಘಾಟನಾ ಕಾರ್ಯಕ್ರಮ ರಾಜಕೀಯವಾಗಿದ್ದು ಅದನ್ನು ಮಾತ್ರ ವಿರೋಧಿಸುತ್ತಿದ್ದೇವೆ ಹೊರಯು ಶ್ರೀರಾಮ ಮಂದಿರವಲ್ಲ ಎಂದರು.
ಹಿAದುಳಿದವರ್ಗಗಳ ಶಾಶ್ವತ ಆಯೋಗ ಇನ್ನೇರಡು ದಿನಗಳಲ್ಲಿ ವರದಿ ನೀಡಲು ಹೇಳಿದ್ದಾನೆ. ಜಯಪ್ರಕಾಣ ಹೆಗ್ಡೆ ಇರುವ ವರದಿ ನೀಡಿದರೆ ಆಂಗೀಕರಿಸುವದಾಗಿ ಹೇಳಿದರು.ಮೈಸೂರ ಲೋಕಸಭಾ ಕ್ಷೇತ್ರಕ್ಕೆ ಪುತ್ರ ಯತೀಂದ್ರ ಸ್ಪರ್ಧಿಸುವದಾಗಿ ಏಲ್ಲಿಯೂ ಹೇಳಿಲ್ಲ. ನಗರಾಭಿವೃದ್ದಿ ಸಚಿವ ಸುರೇಶ ಭೈರತಿ ವೀಕ್ಷಕರಾಗಿ ಹೋಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅವರು ಇನ್ನೂ ವರದಿ ನೀಡಿಲ್ಲ. ವರದಿ ನಂತರ ಪಕ್ಷ ನಿರ್ಧರಿಸುತ್ತದೆ ಎಂದರು. ಲೋಕಸಭಾ ಸದಸ್ಯ ಪ್ರತಾಪಸಿಂಹರಿಗೆ ಸೋಲುವ ಹೆದರಿಕೆ ಪ್ರಾರಂಭವಾಗಿದೆ. ಏನೋ ಹೇಳಿಕೊಳ್ಳುತ್ತಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಕುರಿತು ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸೇರಿ ಪ್ರಮುಖರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತಿದೆ. ಆಯಾ ಉಸ್ತುವಾರಿಗಳು ವರದಿಯನ್ನು ಸಹ ಪರಿಗಣಿಸಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ನೀಡಿರುವ ೭೫೦ ಕೋಟಿ ರೂ ಹಣ ಖರ್ಚು ಮಾಡುವಂತೆ ಸೂಚಿಸಲಾಗಿದೆ. ಕಳೆದ ಬಾರಿ ಜುಲೈನಲ್ಲಿ ಬಜೆಟ್ ಮಂಡಿಸಿ ಅಗಷ್ಟನಲ್ಲಿ ಜಾರಿಗೊಳಿಸಿದ್ದರಿಂದ ಅನುದಾನ ಪೂರ್ಣ ಪ್ರಮಾಣ ಬಳಕೆ ಮಾಡಲು ಸಾಧ್ಯವಾಗಲಿಲ್ಲ. ಇತ್ತೀಚಿಗೆ ಸಭೆ ನಡೆಸಿ ಅನುದಾನ ಬಳಕೆಗೆ ತಾಕೀತು ಮಾಡಿರುವದಾಗಿ ಹೇಳಿದರು.
ಬಿಜೆಪಿ ಜಾತಿ,ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಆ ಕಾರಣಕ್ಕೆ ಮುಸ್ಲಿಂ ಸಮೂದಾಯಕ್ಕೆ ಅನುದಾನ ನೀಡಿದರೆ ತುಷ್ಟೀಕರಣ ಎಂದು ಹೇಳುತ್ತಿದೆ. ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷ, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತದೆ ಎಂದರು. ಗೃಹ ಲಕ್ಷಿ ಯೋಜನೆಗೆ ನೀಡುವ ೨ ಸಾವಿರ ರು ಸಾಲುವದಿಲ್ಲ ಎಂದು ಮಾಜಿ ಪ್ರಧಾನಿ ದೇವೆಗೌಡ ಹೇಳಿಕೆ ಪ್ರತಿಕ್ರಿಯಿಸಿ ಅವರ ಅಧಿಕಾರದಲ್ಲಿದ್ದ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷ ದೇಶ ಸ್ವಾತಂತ್ರö್ಯಕ್ಕಾಗಿ ಹೋರಾಟ ಮಾಡಿದೆ.ಬಿಜೆಪಿಯವರು ಯಾವ ಹೋರಾಟವೂ ಮಾಡಿಲ್ಲ ಎಂದರು.
ಈ ಸಂದರ್ಬದಲ್ಲಿ ಸಚಿವ ಭೈತರಿ ಸುರೇಶ, ಎನ್.ಎಸ್.ಬೋಸರಾಜ,ಶಾಸಕ ಬಸನಗೌಡ ತುರ್ವಿಹಾಳ ಶಾಸಕ ಕರಿಯಮ್ಮ ದದ್ದಲ ಬಸನಗೌಡ ಸೇರಿದಂತೆ ಅನೇಕರಿದ್ದರು.

Megha News