ಸಿಂಧನೂರು:ನಗರದ ವಿವಿಧೆಡೆ ಚಾಲಾಕಿ ಕಳ್ಳರು ತಮ್ಮ ಕೈ ಚಳಕ ತೋರಿಸಿ 1 ಲಕ್ಷಕ್ಕೂ ಅಧಿಕ ಹಣ ದೋಚಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.
ನಗರದ ಪಿಎಲ್ಡಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘ, ಎಲ್ ಐಸಿ ಪ್ರಿಮಿಯಂ ಕಛೇರಿ, ಗೊಬ್ಬರದ ಅಂಗಡಿ, ಬಟ್ಟೆ ಅಂಗಡಿಗಳಿಗೆ ಗುರುವಾರ ಮಧ್ಯರಾತ್ರಿ ಕಳ್ಳತನ ಮಾಡಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಹಣ ದೋಚಲಾಗಿದೆ. ಶುಕ್ರವಾರ ಬೆಳಗ್ಗೆ ಎಂದಿನಂತೆ ಕಚೇರಿಗೆ, ಅಂಗಡಿ ಮುಗ್ಗಟ್ಟುಗಳಿಗೆ ಆಗಮಿಸಿದ ಅಂಗಡಿ ಮಾಲೀಕರು, ಕಚೇರಿ ಸಿಬ್ಬಂದಿಗಳು ಕಳ್ಳತನವಾಗಿರುವ ಬಗ್ಗೆ ದೃಢಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಬಿ.ಎಸ್.ತಳವಾರ ಆಗಮಿಸಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು, ಕಳ್ಳರು ಬೀಗ ಮುರಿದು ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಬೆರಳಚ್ಚುಗಾರರನ್ನು ಕರೆಸಿ ಪರಿಶೀಲನೆ ನಡೆಸಲಾಗುವುದು. ನಂತರ ಕಳ್ಳರನ್ನು ಪತ್ತೆ ಹಚ್ಚಲು ಕ್ರಮವಹಿಸಿ, ಪ್ರಕರಣ ಬೇಧಿಸಲಾಗವುದು ಎಂದು ತಿಳಿಸಿದರು.
ಸಿಸಿ ಟಿವಿಯಲ್ಲಿ ಕಳ್ಳತನ ಮಾಡುವ ದೃಶ್ಯ ಸೆರೆಯಾಗಿದ್ದು, ಚಾಲಾಕಿ ಕಳ್ಳರು ಸಿಸಿ ಟಿವಿಯಲ್ಲಿ ಗುರುತು ಕಾಣಬಾರದು ಎಂದು ಸಿಸಿಟಿವಿಯನ್ನು ಬೇರೆಡೆಗೆ ತಿರುಗಿಸಿ, ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿದ್ದಾರೆ. ಒಂದೇ ದಿನ ಸುಮಾರು 5-6 ಅಂಡಗಿ, ಕಛೇರಿಯಲ್ಲಿ ಕಳ್ಳತನವಾ ಗಿದ್ದರಿಂದ ಜನರು ಭಯಬೀತರಾಗಿದ್ದಾರೆ.