Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsState News

ಹಣ ಕೊಡಲು ವೈದ್ಯರಿಗೆ ಬೆದರಿಕೆ ಕರೆ ವೈದ್ಯರ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

ಹಣ ಕೊಡಲು ವೈದ್ಯರಿಗೆ ಬೆದರಿಕೆ ಕರೆ ವೈದ್ಯರ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

ರಾಯಚೂರು.ವೈದ್ಯರ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಎರಡು ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ ಎಂದು ಬಳ್ಳಾರಿ ವಲಯದ ಐಜಿಪಿ ಲೋಕೇಶ ಕುಮಾರ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಸಾಥ್‌ಮೈಲ್ ಬಳಿ ಬೆಟ್ಟದೂರು ಆಸ್ಪತ್ರೆಯ ವೈದ್ಯ ಜಯಪ್ರಕಾಶ್​ ಮೇಲೆ ಎರಡು ಸುತ್ತಿನ ಗುಂಡಿ ಆರಿಸಿದ್ದಾರೆ, ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ತಗುಲಿಗೆ, ಅಪರಿಚಿತರು ಮಾನವಿ ಕಡೆಗೆ ಹೋಗಿದ್ದಾರೆ, ಭಾರತೀಯ ಸಶಸ್ತ್ರ ಕಾಯ್ದೆ ಐಪಿಸಿ ಸೆಕ್ಷನ್ 302 ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿದೆ‌ ಎಂದರು‌.
ವೈದ್ಯರ ಮೇಲೆ ದಾಳಿ ಹಿನ್ನೆಲೆ ಈ ಹಿಂದೆ ಅವರಿಗೆ ಕಳೆದ 2 ತಿಂಗಳ ಹಿಂದೆ ಬೆದರಿಕೆ ಕರೆ ಬಂದಿತ್ತು, 30 ಸಾವಿರ ಡಾಲರ್ ನೀಡಲು ಬೇದರಿಕೆ ಹಾಕಿದ್ದರು, ನಂತರ ವೈದ್ಯರು ನೇತಾಜಿ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 504 ರಡಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ, ಈ ಬೆನ್ನಲ್ಲೆ ಅವರ ಮೇಲೆ ದಾಳಿ ನಡೆದಿದೆ ಎಂದರು.
ವೈದ್ಯರು ಹಣ ಕೊಡಲಿಲ್ಲವೆಂಬುದು, ಹಾಗೂ ವೈಯಕ್ತಿಕ ಕಾರಣವಿರಬಹುದು, ಅವರು ಕರೆ ಮಾಡಿದ ಮೊಬೈಲ್ ಟ್ರೆಸ್ ಮಾಡಿದ್ದು ಹೊಸ ಸಿಮ್ ಕಾರ್ಡ್ ಬಳಸಿ ಕರೆ ಮಾಡಿದ್ದಾರೆ, ಪ್ರಕರಣ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

Megha News