ರಾಯಚೂರು- ಧರ್ವೆಶ ಗ್ರೂಪ್ನಲ್ಲಿ ಹಣ ಹೂಡಿದ್ದ ವ್ಯಕ್ತಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರನ್ನು ಸೋಮವಾರದಂದು ಎರಡನೇ ಹೆಚ್ಚುವರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಧರವೇಶ ಗ್ರೂಪ್ನ ಪಾಲುದಾರರಾದ ಸೈಯದ್ ವಸೀಂ, ಸೈಯದ್ ಮಸ್ಕೀನ್, ಬಬ್ಲೂ ಎಂಬುವವರು ಹೂಡಿಕೆ ಮಾಡಿದದ ಹಣ ನೀಡದೇ ವಂಚಿಸಿದ್ದಾರೆ ಎಂದು ವೆಂಕಟೇಶ ಎಂಬುವವರು ರಾಯಚೂರು ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರ ನಡೆಸಿದ ಪೊಲೀಸರು ಮೂರು ಜನರನ್ನು ಬಂಧಿಸಿದ್ದರು. ಬಂಧಿತ ಮೂರು ಜನ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಗ್ರೂಪ್ ಮುಖ್ಯಸ್ಥ ಮಹ್ಮದ ಸೂಜಾ ಸೇರಿ ನಾಲ್ಕು ಜನರ ವಿರುದ್ದ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.