ರಾಯಚೂರು,ನ.೨೨- ನಗರದ ವಾರ್ಡ೩೧ ರಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ ನಿಷೇಧಿತ ರಾಸಾಯನಿಕ ಬಳಸಿ ಸೇಂಧಿ ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ.
ಗುರುವಾರ ಸಂಜೆ ಧಾಳಿ ನಡೆಸಿರುವ ಅಧಿಕಾರಿಗಳು ಲಕ್ಷ್ನಣ ಇವರ ಮನೆ ಮೇಲೆ ಧಾಳಿ ನಡೆಸಿ ಕೈ ಹೆಂಡ ತಯಾರಿಸಲು ಬಳಸುವ ಅಲ್ಫಾ ಜೋಲ್ಮಂ, ಸಿಎಚ್ ಪೌಡರ್, ಬಿಳಿ ಪೇಸ್ಟ ಸೇರಿದಂತೆ ೭೦ ಲೀಟರ್ ಸೇಂಧಿ ಜಪ್ತಿ ಮಾಡಿಕೊಂಡು ಲಕ್ಷ್ಮಣ,ಹುಲಿಗೆಮ್ನ ಮತ್ತು ಜಮಲಮ್ಮ ಎಂಬುವವರನ್ನು ಬಂಧಿಸಿದ್ದಾರೆ. ನಗರಸಭೆ ವಾರ್ಡ೩೧ ರಲ್ಲಿ ಚುನಾವಣೆ ಘೋಷಣೆಯಾಗಿದ್ದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಅದರೂ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಅಬಕಾರಿ,ನೇತಾಜಿ ನಗರ ಪೊಲೀಸರು,ಕಂದಾಯ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.