ಸಿಂಧನೂರು: ಡಿ.17-ಅತಿವೇಗದಿಂದ ಬಂದ ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಮೂವರು ವ್ಯಕ್ತಿಗಳ ಮೇಲೆ ಲಾರಿ ಉರುಳಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ನಗರದ ಪಿಡಬ್ಯೂಡಿ ಕ್ಯಾಂಪ್ ನ ಡಾಲರ್ಸ್ ಕಾಲೋನಿ ಬಳಿ ನಡೆದಿದೆ.
ನೀರಾವರಿ ಇಲಾಖೆ ಜವಳಗೇರಾ ಉಪವಿಭಾಗದ ಕಿರಿಯ ಎಂಜನೀಯರುಗಳಾದ ಶಿವರಾಜ ರಾಂಪುರ (28), ಮಲ್ಲಿಕಾರ್ಜುನ ಸರ್ಜಾಪುರ (29) ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ಮಹೆಬೂಬ್ ಪಿಡಬ್ಲ್ಯೂಡಿ ಕ್ಯಾಂಪ್ (30) ಮೃತ ದುರ್ದೈವಿಗಳು.
ಜವಳಗೇರಾದಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿಗೆ ಬಂದು, ಪಿಡಬ್ಲ್ಯೂಡಿ ಕ್ಯಾಂಪಿನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಬಳಿ ಬೈಕ್ ನಲ್ಲಿ ಮೂವರು ಮಾತನಾಡುತ್ತಾ, ನಿಂತಿದ್ದಾರೆ. ಭತ್ತದ ಒಟ್ಟಿನ ಚೀಲವನ್ನು ತುಂಬಿಕೊಂಡು ಹಿಂದೆ ಇದ್ದ ಅತಿವೇಗದಿಂದ ಬಂದ ಲಾರಿ ಪಲ್ಟಿಯಾಗಿ, ಮೂವರ ಮೇಲೆ ಉರುಳಿದ್ದು, ಒಟ್ಟಿನ ಚೀಲಗಳ ಮಧ್ಯೆ ಸಿಲುಕಿ ಮೂವರು ಕೊನೆಯುಸಿರೆಳೆದಿದ್ದಾರೆ. ಎರಡು ಬೈಕ್ ಗಳು ಸಹ ನಜ್ಜುಗುಜ್ಜಾಗಿವೆ. ಲಾರಿ ಚಾಲಕ ಮಧ್ಯಪಾನ ಮಾಡಿ, ಅತಿವೇಗದಿಂದ ವಾಹನ ಚಲಾಯಿಸಿದ್ದೆ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಒಟ್ಟಿನ ಚೀಲದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಜೆಸಿಬಿ ವಾಹನದ ಸಹಾಯದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಯಿತು.
ವಿಷಯ ತಿಳಿದು ಘಟನಾ ಸ್ಥಳಕ್ಕೆ ನಗರ ಸಂಚಾರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Megha News > Crime News > ಸಿಂಧನೂರು: ರಸ್ತೆ ಬದಿಯಲ್ಲಿ ನಿಂತಿದ್ದಾಗ ಲಾರಿ ಪಲ್ಟಿ- ಮೂರು ಜನ ಸಾವು
ಸಿಂಧನೂರು: ರಸ್ತೆ ಬದಿಯಲ್ಲಿ ನಿಂತಿದ್ದಾಗ ಲಾರಿ ಪಲ್ಟಿ- ಮೂರು ಜನ ಸಾವು
Tayappa - Raichur17/12/2024
posted on
Leave a reply