ರಾಯಚೂರು,ನಗರಸಭೆ ಕಛೇರಿಯ ಕಂದಾಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಮುಟೇಷನ್/ಫಾರಂ-ಬಿ, ಆಸ್ತಿ ತೆರಿಗೆ ವಸೂಲಾತಿ, ನೀರಿನ ಶುಲ್ಕ ವಸೂಲಾತಿ, ಮಳಿಗೆಗಳ ಬಾಡಿಗೆ ವಸೂಲಾತಿ ಹಾಗೂ ಕಡತಗಳ ವಿಲೇವಾರಿಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ನಗರಸಭೆ ಕಛೇರಿಯಲ್ಲಿ ಕಂದಾಯ ವಿಭಾಗದ ಎಲ್ಲಾ ಸಿಬ್ಬಂದಿಗಳಿಗೆ ಪ್ರತ್ಯೇಕ ಗಣಕೀಕೃತ ವ್ಯವಸ್ಥೆಯೊಂದಿಗೆ ಕೌಂಟರ್ ಕೊಠಡಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತ್ಯೇಕವಾಗಿ ನಿರ್ಮಿಸಿಕೊಡಲಾಗಿದ್ದು, ಸಾರ್ವಜನಿಕರಿಗೆ ನಿಗದಿತ ಕಾಲಾವಧಿಯಲ್ಲಿ ಸಕಾಲ ಸೇವೆಗಳನ್ನು ಒದಗಿಸಲು ರಾಯಚೂರು ನಗರಸಭೆ ಕಂದಾಯ ವಿಭಾಗದ ಎಲ್ಲಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸತಕ್ಕದ್ದು ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ಬೆಳಿಗ್ಗೆ ೭:೦೦ ರಿಂದ ೯:೩೦ರವರೆಗೆ ತಮ್ಮ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ನಿವೇಶನ/ಮನೆ/ವಾಣಿಜ್ಯ ಮಳಿಗೆಗಳ ಕರ ವಸೂಲಿ ಹಾಗೂ ನೀರಿನ ಶುಲ್ಕವನ್ನು ಮನೆ-ಮನೆಗೆ ತೆರಳಿ ವಸೂಲಾತಿ ಮಾಡುವುದು, ಬೆಳಿಗ್ಗೆ ೧೧:೦೦ ರಿಂದ ಮಧ್ಯಾಹ್ನ ೪:೦೦ ಗಂಟೆವರೆಗೆ ಕಛೇರಿಯ ತಮ್ಮ ಕೌಂಟರ್‌ನಲ್ಲಿ ಆನ್‌ಲೈನ್ ಅರ್ಜಿ ಹಾಕುವುದು, ಚಲನ್ ಜನರೇಟ್ ಮಾಡುವುದು ಸಕಾಲ ಅರ್ಜಿಗಳನ್ನು ವಿಲೇವಾರಿ ಮಾಡುವುದು, ಸಂಜೆ ೪:೩೦ ರಿಂದ ರಾತ್ರಿ ೮:೦೦ ಗಂಟೆವರೆಗೆ ತಮ್ಮ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ನಿವೇಶನ/ಮನೆ/ವಾಣಿಜ್ಯ ಮಳಿಗೆಗಳ ಕರ ವಸೂಲಿ ಹಾಗೂ ನೀರಿನ ಶುಲ್ಕವನ್ನು ಮನೆ-ಮನೆಗೆ ತೆರಳಿ ವಸೂಲಾತಿ ಮಾಡಲಾಗುವುದೆಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.