ರಾಯಚೂರು. ಬಿಸಿ ಗಾಳಿಗೆ ವಿದ್ಯುತ್ ವೈಯರ್ ಒಂದಕ್ಕೊಂದು ತಾಕಿ ಬೆಂಕಿ ಹತ್ತಿಕೊಂಡಿರುವ ಘಟನೆ ನಗರದ ಹರಿಹರ ರಸ್ತೆಯ ನಗರಸಭೆ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಬೇಸಿಗೆ ಬಿಸಿಲಿತ ತಾಪಮಾನ ಹೆಚ್ಚಿದ್ದು ಕಳೆದ ಎರಡು ಮೂರು ದಿನಗಳಿಂದ ಶೇ 44 ಡಿಗ್ರಿ ಸೆ. ದಾಖಲಾಗುತ್ತಿದ್ದು, ಹವಮಾನ ಇಲಾಖೆಯು ಬಿಸಿ ಗಾಳಿ ಹೆಚ್ಚರುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ, ಹಿನ್ನೆಲೆ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಬಿಸಿ ಗಾಳಿ ಉಂಟಾಗಿದ್ದರಿಂದ
ನಗರದ ಹರಿಹರ ರಸ್ತೆಯ ಹಳೇ ನಗರಸಭೆ ಕಾಂಪ್ಲೆಕ್ಸ್‌ನ ರಸ್ತೆ ಬದಿಯಲ್ಲಿ ಇರುವ ಕಂಬಕ್ಕೆ ಹಾಕಿರುವ ವೈಯರ್ ಗಾಳಿಗೆ ಒಂದಕ್ಕೊಂದು ತಾಗಿ ಬೆಂಕಿ ಹತ್ತಿಕೊಂಡಿದೆ, ಇದರಿಂದಾಗಿ ವೈಯರ್ ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಸ್ಥಳೀಯ ಅಗ್ನಿಶಾಮನ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ವೈಯರ್ ಗೆ ಬೆಂಕಿ ಹತ್ತಿಕೊಂಡಿದ್ದರಿಂದ ಕೆಲಕಾಮ ಬಿಗುವಿನ ವಾತಾವರಣ ನಿರ್ಮಾಣ ವಾಯಿತು, ಯಾವುದೇ ಅಹಿತಕರ ಘಟನೆ ಮತ್ತು ಯಾವುದೇ ಪ್ರಾಣಹಾನಿಯೂ ಸಂಭವಿಸಿಲ್ಲ.
ಜೆಸ್ಕಾಂ ಸಿಬ್ಬಂಧಿಗಳು ಆಗಮಿಸಿ ವೈರ್ ಗಳನ್ನು ಬದಲಿಸಿ ದುರಸ್ತಿ ಮಾಡಿದರು.
ಬಜಾರ್ ರಸ್ತೆಯಲ್ಲಿ ಘಟನೆ ನಡೆದಿದ್ದರಿಂದ
ಸುಮಾರು 9 ರಿಂದ 10 ಗಳವರೆಗೆ ಬಜಾರದ ಲ್ಲಿರುವಂತ ವ್ಯವಹಾರದ ಸಂಪೂರ್ಣ ಅಂಗಡಿಗಳು ವಿದ್ಯುತ್ ಇಲ್ಲದೆ ವ್ಯಾಪಾರಕ್ಕಾಗಿ ತೊಂದರೆ ಉಂಟಾಯಿತು.