Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಜಿಲ್ಲೆಯಲ್ಲಿ ಸದರ್ ಬಜಾರ್ ಪೋಲಿಸ್ ಠಾಣೆ ಸೇರಿದಂತೆ ವಿವಿಧ ಪೋಲಿಸ್ ಪಿಎಸ್ಐಗಳು ವರ್ಗಾವಣೆ ಸರ್ಕಾರ ಆದೇಶ

ಜಿಲ್ಲೆಯಲ್ಲಿ ಸದರ್ ಬಜಾರ್ ಪೋಲಿಸ್ ಠಾಣೆ ಸೇರಿದಂತೆ ವಿವಿಧ ಪೋಲಿಸ್ ಪಿಎಸ್ಐಗಳು ವರ್ಗಾವಣೆ ಸರ್ಕಾರ ಆದೇಶ

ರಾಯಚೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಬರೋಬ್ಬರಿ 218 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಮಾಡಿದ್ದು,ವಿಜಯನಗರ ಜಿಲ್ಲೆಯ ಚಿತ್ತವಾಡಗಿ ಪೋಲಿಸ್ ಠಾಣೆಯ ಪಿಎಸ್ಐ ಉಮ್ಮೇಶ್ ನಾರಾಯಣ ಕಾಂಬ್ಳೆ ಅವರನ್ನು ರಾಯಚೂರಿನ ಸದರ್ ಬಜಾರ್ ಪೋಲಿಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಸದರ್ ಬಜಾರ್ ಪೋಲಿಸ್ ಠಾಣೆಯ ಪಿಎಸ್ಐ ಗುರುರಾಜ ಆರ್. ಕಟ್ಟಿಮನಿ
ಅವರನ್ನು ಹೊಸಪೇಟೆ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಜೆಸ್ಕಾಂ ಜಾಗೃತ ದಳದ ಪಿಎಸ್ಐ ರಾಜ ಕುಮಾರ ವಾಜಂತ್ರಿ ಅವರನ್ನು ರಾಯಚೂರು ಸಿಇಎನ್ ಪೋಲಿಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಪಿಎಸ್ಐ ಬಸರಾಜ ಗುರುಲಿಂಗಪ್ಪ ತೇಲಿ ಅವರನ್ನು ರೈಲ್ವೆ ಪೋಲಿಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

Megha News