ರಾಯಚೂರು. ಕಸ ವಿಲೇವಾರಿ ಮಾಡುವ ಟ್ರಾಕ್ಟರ್ ನ್ನು ಖಾಸಗಿಗೆ ಬಳಸಿಕೊಂಡು ಭತ್ತದ ಹುಲ್ಲು ಸಾಗಾಣೆ ಮಾಡಲಾಗುತ್ತಿದೆ, ಇಂತಹ ದೊಂದು ಪ್ರಕರಣ ಮಸ್ಕಿ ತಾಲೂಕಿನ ತುರ್ವಿ ಹಾಳ ಪಟ್ಟಣ ಪಂಚಾಯತಿಯಲ್ಲಿ ನಡೆದಿದೆ.
ಪಟ್ಟಣದಲ್ಲಿ ಕಸ ವಿಲೇವಾರಿ ಮಾಡುವ ಟ್ರಾಕ್ಟರ್ ನಲ್ಲಿ ಭತ್ತದ ಹುಲ್ಲುನ್ನು ಸಾಗಾಣಿಕೆ ಮಾಡುತ್ತಿ ರುವ ವಿಡಿಯೋವೊಂದು ಸಾಮಾಜಿಕ ಜಾಲಾತಾ ಣದಲ್ಲಿ ಹರಿದಾಡುತ್ತಿದೆ.
ತುರ್ವಿಹಾಳ ಪಟ್ಟಣ ಪಂಚಾಯತಿಗೆ ಸೇರಿದ ಟ್ರಾಕ್ಟರ್ (ಕೆ.ಎ-36, ಜಿ-0501) ಭತ್ತದ ಹುಲ್ಲು ಸಾಗಾಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪಟ್ಟಣ ಪಂಚಾಯತಿ ಟ್ರಾಕ್ಟರ್ ರನ್ನು ಗುತ್ತಿಗೆ ನೀಡಿದ್ದಾರೆ, ಇಲ್ಲವೆ ಇದನ್ನು ದುರ್ಬಳಕೆ ಮಾಡಿ ಕೊಂಡಿದ್ದಾರೆ.ಎನ್ನುವುದನ್ನು ಸ್ಪಷ್ಟಪಡಿಸಬೇಕಿದೆ.
ಟ್ರಾಕ್ಟರ್ ರನ್ನು ಬೆಳಗ್ಗೆ ಕಸ ವಿಲೇವಾರಿ ಮಾಡಿದ ನಂತರ ಅದನ್ನು ಅಧಿಕಾರಿಗಳು ಖಾಸಗಿಗೆ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾರ್ವಜ ನಿಕರು ಒತ್ತಾಯಿಸಿದ್ದಾರೆ.