Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ತುಂಗಾನದಿ ಕಾರಿಡಾರ್ – ಶ್ರೀ ಜಗನ್ನಾಥ ದಾಸರ ಸಂಗ್ರಹಾಲಯ ಲೋಕಾರ್ಪಣೆ

ತುಂಗಾನದಿ ಕಾರಿಡಾರ್ – ಶ್ರೀ ಜಗನ್ನಾಥ ದಾಸರ ಸಂಗ್ರಹಾಲಯ ಲೋಕಾರ್ಪಣೆ

ಮಂತ್ರಾಲಯ. ಧಾರ್ಮಿಕ ಕ್ಷೇತ್ರದಲ್ಲಿ ಹರಿಯುವ ನದಿಗಳ ಉಗಮ, ಅವುಗಳ ಮಹತ್ವದ ಕುರಿತು ಭಕ್ತಾದಿಗಳಿಗೆ ತಿಳಿಸುವುದು ಬಹಳ ಅವಶ್ಯಕತೆ ಇದೆ ಎಂದು ಮಂತ್ರಾಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.

ಶ್ರೀ ಮಠದ ಆವರಣದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ 2ನೇ ದಿನದಂದು ತುಂಗಭದ್ರಾ ನದಿಯಿಂದ ಶ್ರೀ ಮಠದವರೆಗಿನ ತುಂಗಾನದಿ ಕಾರಿಡಾರ್ (ತುಂಗಾ ಮಾರ್ಗ) ಹಾಗೂ ಶ್ರೀ ಜಗನ್ನಾಥ ದಾಸರ ಜೀವ ನ, ಕೃತಿಗಳ ಪರಿಚಯ ಮಾಡಿಕೊಡುವ ಸಂಗ್ರಹಾ ಲಯ (ಮ್ಯೂಸಿಯಂ) ರ್ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಧಾರ್ಮಿಕವಾಗಿ ನದಿಗಳು ಬಹಳ ಅತ್ಯಂತ ಪವಿ ತ್ರವಾಗಿದ್ದು, ಅವುಗಳ ಮಹತ್ವ ಸಾರುವ ಕೆಲಸಕ್ಕೆ ಶ್ರೀಮಠ ಮುಂದಾಗಿದ್ದು, ಅದರ ಭಾಗವಾಗಿ ಇಂದು ಸಾಂಕೇತಿಕವಾಗಿ ತುಂಗಾಮಾರ್ಗ ಉದ್ಘಾ ಟಿಸಲಾಗಿದೆ. ಬಾಕಿ ಇರುವ ಕಾಮಗಾರಿ ಆರಾಧನೆ ನಂತರ ಕೈಗೊಳ್ಳಲಾಗುವುದು ಎಂದರು.
ನದಿಗಳ ಉಗಮ, ಅವುಗಳ ಪಾವಿತ್ರತೆ, ಸ್ಮರಣೆ, ಸಂಕಲ್ಪ ಸೇರಿದಂತೆ ಪೂಣ್ಯ ಸ್ನಾನದ ಮಹತ್ವವ ನ್ನು ಭಕ್ತಾದಿಗಳಿಗೆ ಸಾರುವ ಉದ್ದೇಶ ತುಂಗಾ ನದಿ ಕಾರಿಡಾರ್ ಹೊಂದಲಾಗಿದೆ.
ದಾಸ ಸಾಹಿತ್ಯದ ಶ್ರೀ ಜಗನ್ನಾಥ ದಾಸರು ರಚಿಸಿ ರುವ ಹರಿಕಥಾಮೃತ ಸಾರ ಬಹಳ ಮಹತ್ವದಾ ಗಿದ್ದು, ಅವರ ಜೀವನ, ಕೃತಿಗಳ ಪರಿಚಯಿಸುವ ಈ ಸಂಗ್ರಹಾಲಯ ಮಾರ್ಗದರ್ಶಕವಾಗಿದ್ದು, ಇಲ್ಲಿ ಹರಿಕಥಾಮೃತಸಾರದ 32 ಸುಳಾಧಿಗಳ ಸಂಪೂರ್ಣವಾಗಿ ಚಿತ್ರದೊಂದಿಗೆ ಅದ್ಭುತವಾಗಿ ಮೂಡಿಬಂದಿದೆ.
ಇದರ ಜೊತೆಗೆ ರಾಘವೇಂದ್ರ ಸ್ವಾಮಿಗಳ ಜೀವ ನ ಚರಿತ್ರೆಯನ್ನು ಸಾರುವ ಸಂಗ್ರಹಾಲಯ (ಮ್ಯೂಸಿಯಂ) ಕಾರ್ಯ ಪ್ರಗತಿಯಲ್ಲಿದೆ, 35 ಕೋಟಿ ವೆಚ್ಚದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ರಾಮಕಥಾ ಥಿಮ್ ಪಾರ್ಕ್ ಮುಂದಿನ 6 ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ದಾಸಸಾಹಿತ್ಯ ಪ್ರಾಜೆಕ್ಟ್‌ ನಿರ್ದೇಶಕ ಅಪ್ಪಣ್ಣ ಆಚಾರ್ಯ, ವಿಧ್ವಾನ ಮಧುಗಿರಿ ಆಚಾರ್ಯ, ಮುಳಬಾಗಿಲು ಕೃಷ್ಣಾಚಾರ್ಯ, ಸುಳಾದಿ ಹನುಮೇಶ ಆಚಾರ್ಯ ಸೇರಿದಂತೆ ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Megha News