ರಾಯಚೂರು.ಸಿಎಚ್.ಪೌಡರ್ ಮಾರಾಟ ಮಾಡಲು ಸಾಗಾಣೆ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿ 4200 ಮೌಲ್ಯದ 6 ಕೆಜಿ.ಸಿಎಚ್ ಪೌಡರ್ ಹಾಗೂ ಇಬ್ಬರು ಬಂಧಿಸಿದ್ದಾರೆ.
ತಾಲೂಕಿನ ಬಾಪೂರ ಗ್ರಾಮದಲ್ಲಿ ರಾಯಚೂರು ನಗರದ ಮಡ್ಡಿಪೇಟೆ ನಿವಾಸಿ ಹಂಪಯ್ಯ, ಹರಿಜನವಾಡದ ನಿವಾಸಿ ನಾರಾಯಣ ಇವರು ಬಾಪುರು ಗ್ರಾಮದಿಂದ ನಗರಕ್ಕೆ ಆಗಮಿಸುತ್ತಿದ್ದ ವೇಳೆ ಪೋಲಿಸರ ದಾಳಿಗೆ ಒಳಗಾಗಿದ್ದಾರೆ.
ದಾಳಿಯಿಂದಾಗಿ 6 ಕೆ.ಜಿ. ಸಿ.ಹೆಚ್ ಪೌಡರ್ ಅಂದಾಜು 4200 ರೂ. ಬೆಲೆ ಬಾಳುವ ಸಿ.ಹೆಚ್ ಪೌಡರ್ ವಶಕ್ಕೆ ಪಡೆದುಕೊಂಡಿದ್ದು, ಇಬ್ಬರು ಆರೋಪಗಳನ್ನು ಬಂದಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಈ ಕುರಿತು ಯರಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.