ರಾಯಚೂರುಸೆ.೫- ಮಾನವಿ ತಾಲೂಕಿನ ಕುರ್ಡಿ ಕ್ರಾಸ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಶಾಲಾ ಮಕ್ಕಳು ಗಂಬೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಗ ಮೃತ ಪಟ್ಟ ಘಟನೆ ವರದಿಯಾಗಿದೆ.
ಕುರ್ಡಿಗ್ರಾಮ ಸಮರ್ಥ (೭) ಮತ್ತು ಶ್ರೀಕಾಂತ(೧೪) ಎಂಬ ಮಕ್ಕಳು ಮೃತಪಟ್ಟಿದ್ದಾರೆ. ಇತರೆ ಮೂರು ಜನ ವಿದ್ಯಾರ್ಥಿ ಗಂಬೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾನವಿ ಶಾಸಕ ಹಂಪಯ್ಯನಾಯಕ ಮತ್ತು ಡಿಸಿ ರಿಮ್ಸ್ ಆಸ್ಪತ್ರೆಗೆ ಬೇಟಿ ಪರಿಶೀಲಿಸಿದ್ದಾರೆ.