ರಾಯಚೂರು. ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟವರು, ಬಸವರಾಜ (25) ದುರುಗಮ್ಮ ರಾಂಪಳ್ಳಿ (72) ಎಂದು ತಿಳಿದು ಬಂದಿದೆ.
ಬೈಕ್ ಗೆ ಎಚ್‌ಪಿ ಗ್ಯಾಸ್ ತುಂಬಿದ ಗೂಡ್ಸ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಲಿಂಗಸೂಗೂರು ತಾಲೂಕಿನ ಹೊಸಗುಡ್ಡ ಗ್ರಾಮದ ಬಸವರಾಜ (25) ಮೃತಪಟ್ಟಿದ್ದಾರೆ.
ಜಾಲಹಳ್ಳಿ ಯಿಂದ ರಾಯಚೂರಿಗೆ ತೆರಳುವ ಮಾರ್ಗ ಮಧ್ಯ ಜಾಲಹಳ್ಳಿ ಸಮಿಪದ ಕರಡಿಗುಡ್ಡ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಎಚ್ ಪಿ ಗ್ಯಾಸ್ ತುಂಬಿದ ಗೂಡ್ಸ್ ಲಾರಿ ಬೈಕ್ ಸವಾರನ ಮೈ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ
ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಪಾದಚಾರಿಗೆ ಢಿಕ್ಕಿ ಹೊಡಿದಿಂದರಿಂದ ಜಾಲಹಳ್ಳಿ ಗ್ರಾಮದ ದುರುಗಮ್ಮ ರಾಂಪಳ್ಳಿ (72) ಎನ್ನುವ ವೃದ್ಧ ಮಹಿಳೆ ಮೃತಪಟ್ಟದಾರೆ.
ಗೊಲಪಲ್ಲಿಯಿಂದ ಬರುತ್ತಿರುವಾಗ ಸುರಪೂರ ಲಿಂಗಸೂರ ಮುಖ್ಯ ರಸ್ತೆಯ ತಿಂತಿಣಿ ಬೀಜ್‌ನ ವಾಲ್ಮೀಕಿ ವೃತ್ತದ ಮುಂಬಾಗದಲ್ಲಿ ದುರುಗಮ್ಮ ರಸ್ತೆ ದಾಟುತ್ತಿರುವಾಗ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿರ್ಲಕ್ಷ್ಯತನದಿಂದ ಮಹಿಳೆಯ ಮೇಲೆ ಹರಿದಿದೆ. ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಕುರಿತು ಜಾಲಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿ ಯಲ್ಲಿ ಘಟನೆ ಜರುಗಿದೆ.