ರಾಯಚೂರು. ಕಾರಿಗೆ ದ್ವಿಚಕ್ರ ವಾಹನ ಅಡ್ಡ ಬಂದಿದ್ದರಿಂದ ತಪ್ಪಿಸಲು ಹೋಗಿ ಕಾರು ಚರಂಡಿ ಕಾಲುವೆಗೆ ನುಗ್ಗಿದ ಘಟನೆ ನಗರದ ಹೈದರಾಬಾ ದ್ ಮುಖ್ಯ ರಸ್ತೆಯ ಜಿಲ್ಲಾ ಪೋಲಿಸ್ ವರಿಷ್ಠಾ ಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದಿದೆ.
ಸ್ಥಳಕ್ಕೆ ಸಂಚಾರಿ ಪೋಲಿಸರು ತೆರಳಿ ದ್ವಿಚಕ್ರ ವಾಹನ (ಸ್ಕೂಟಿ) ಚಾಲಕಿ ಜಯಲಕ್ಷ್ಮಿ ಹಾಗೂ ಕಾರಿನ ಚಾಲಕ ಡಾ.ಗೊಪಾಲಗೆ ತಲೆಗೆ ಸಣ್ಣಪುಟ್ಟ ಗಾಯಗೊಂಡಿದ್ದು, ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ರಸ್ತೆ ಅಪಘಾತದಿಂದಾಗಿ ರಾಯಚೂರ- ಹೈದರಾಬಾದ್ ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ನಂತರ ಪೋಲಿಸರು ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಈ ಕುರಿತು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.